ಭಯ್ಯು... ನಿನ್ನೊಟ್ಟಿಗೆ ಕೆಲಸ ಮಾಡಿದ್ದು ಅತ್ಯದ್ಭುತ ಅನುಭವ, 19 ವರ್ಷಗಳು ಕಳೆದುಹೋದವು.. ಸಮಯ ಹಾರಿ ಹೋಗುತ್ತಿದೆ.. ಎಂದೆಲ್ಲ ದಶರಥ್ ಸಿಂಗ್ ಬಂಟಿಯನ್ನು ನೆನಪಿಸಿಕೊಂಡು ಎಕ್ಸ್ ವೇದಿಕೆಯಲ್ಲಿ ಮಾತಾಡಿದ್ದಾರೆ.

ಅದೇ ಬಂಟಿ ಔರ್ ಬಬಲಿ ಸಿನಿಮಾ ಬಿಡುಗಡೆಯಾಗಿ ಹತ್ತೊಂಬತ್ತು ವರ್ಷಗಳು ಕಳೆದವು. ಅಭಿಶೇಕ್ ಬಚ್ಚನ್, ರಾಣಿ ಮುಖರ್ಜಿ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಡಿಸಿಪಿ ದಶರಥ್ ಸಿಂಗ್ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯಿಸಿದ್ದರು.

ಕಜರಾರೆ.. ಕಜರಾರೆ ತೆರೆ ಕಾಲೆ ಕಾಲೆ ನೈನಾ ಎಂಬ ಐಟಮ್ ಹಾಡಿನಲ್ಲಿ ಐಶ್ವರ್ಯ ರೈ ಸಹ ಜೊತೆಗೂಡಿದ್ದರು. ಆ ಹಾಡಿನ ಲೈವ್ ಅನ್ನೂ ನೆನಪಿಸಿಕೊಂಡಿರುವ ಬಿಗ್‌ಬಿ.. ತಮ್ಮ ಅತ್ಯುತ್ತಮ ಅನುಭವಗಳಲ್ಲಿ ಒಂದು ಎಂದೂ ಹೇಳಿದ್ದಾರೆ.

ಆಲಿಶಾ ಚಿನೈ, ಶಂಕರ್ ಮಹಾದೇವನ್ ಹಾಡಿರುವ ಈ ಹಾಡು ಈಗಲೂ ಬಾಲಿವುಡ್ ಹಿಟ್ಸ್‌ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.