ಬಿಗ್‌ಬಾಸ್ ಸ್ಪರ್ಧಿಗಳಾಗಿದ್ದ ದಿವ್ಯಾ ಉರುಡಗ ಹಾಗೂ ಅರವಿಂದ್ ಕೆ.ಪಿ. ನಟಿಸಿರುವ ‘ಅರ್ದಂಬರ್ದ ಪ್ರೇಮಕಥೆ’ ಚಿತ್ರದ ‘ಹುಚ್ಚುಮನಸಿನ ಹುಡುಗಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ಹುಲಿರಾಯ’ ಖ್ಯಾತಿಯ ಅರವಿಂದ್ ಕೌಶಿಕ್ ಅವರ ನಿರ್ದೇಶನದ ಚಿತ್ರಕ್ಕೆ ಮೂಡಿಬರುತ್ತಿರುವ ಚಿತ್ರಕ್ಕೆ ಬಕ್ಸಾಸ್ ಮೀಡಿಯಾ ಬಂಡವಾಳ ಹೂಡಿದೆ.

‘ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಸೆನ್ಸಾರ್ ಪ್ರಕ್ರಿಯೆ ನಡೆಯುತ್ತಿದೆ. ನವೆಂಬರ್‌ನಲ್ಲಿ ತೆರೆಗೆ ತರುವ ಆಲೋಚನೆಯಿದೆ. ನಾನು ಈ ಕಥೆ ಶುರು ಮಾಡಿದಾಗಲೇ ನಾಯಕಿ ಪಾತ್ರಕ್ಕೆ ದಿವ್ಯಾ ಅವರನ್ನು ಆಯ್ಕೆ ಮಾಡಿದ್ದೆ. ಅವರನ್ನು ಒಪ್ಪಿಸಿದ ಮೇಲೆ ಅರವಿಂದ್ ನಾಯಕ ಪಾತ್ರ ಮಾಡಿದರೆ ಹೇಗೆ ಅನಿಸಿತು. ದಿವ್ಯಾ ಮೂಲಕ ಅವರನ್ನು ಕೇಳಿದಾಗ ಸಮಯ ತೆಗೆದುಕೊಂಡು ಒಪ್ಪಿಕೊಂಡರು’ ಎಂದರು ಅರವಿಂದ್ ಕೌಶಿಕ್.

ಈ ಗೀತೆಗೆ ನಿರ್ದೇಶಕರೇ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ವಾಸುಕಿ ವೈಭವ್, ಪೃಥ್ವೀ ಭಟ್ ಹಾಡಿದ್ದಾರೆ.

ನಾಯಕ ಅರವಿಂದ್ ಮಾತನಾಡಿ, ‘ಅಭಿನಯ ನಿಜವಾಗಿಯೂ ಕಷ್ಟದ ಕೆಲಸವೇ. ಒಂದಷ್ಟು ದಿನದ ವರ್ಕ್‌ಶಾಪ್ ನಂತರ ಬಣ್ಣ ಹಚ್ಚಿದೆ. ಆರಂಭದ 2-3 ದಿನ ಸ್ವಲ್ಪ ಕಷ್ಟವಾಗಿತ್ತು, ನಿರ್ದೇಶಕ ಅರವಿಂದ್ ಹಾಗೂ ದಿವ್ಯಾ ಇಬ್ಬರೂ ನನಗೆ ನಟನೆ ಹೇಳಿಕೊಟ್ಟರು’ ಎಂದರು.

‘ಈ ಹಾಡನ್ನು ಅಭಿಮಾನಿಗಳಿಗೆ ಅರ್ಪಿಸಲೆಂದು ಅವರಿಂದಲೇ ರಿಲೀಸ್ ಮಾಡಿಸಿದ್ದೇವೆ. ಸ್ವಲ್ಪ ಮುಂಗೋಪಿಯಾದರೂ, ಮನಸು ಹೂವಿನಂತಿರುವ ಹುಡುಗಿ ಪಾತ್ರ ಮಾಡಿರುವೆ. ಜನ ಅವಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಆಕೆಗಿರುವ ರಿಯಲ್ ಲೈಫ್ ಸಮಸ್ಯೆಗಳಿಂದ ಹಾಗೆ ನಡೆದುಕೊಳ್ಳುತ್ತಾಳೆ’ ಎಂದು ಪಾತ್ರದ ಕುರಿತು ವಿವರಿಸಿದರು ದಿವ್ಯಾ.

ರ‍್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಿರಿಯ ನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದ ಮೂಲಕ 25 ವರ್ಷಗಳ ನಂತರ ನಟನೆಗೆ ಮರಳಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.