ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಕಾದಂಬರಿ ‘ಆವರಣ’ವನ್ನು ಓದಿದವರು, ಓದದೇ ಇದ್ದವರು ಇದನ್ನು ಸದ್ಯದಲ್ಲೇ ಆಡಿಯೊ ರೂಪದಲ್ಲಿ ಆಲಿಸಬಹುದು.

ಈ ಕಾದಂಬರಿಯ ‘ಆಡಿಯೋಕರಣ’ದ ಕೆಲಸವನ್ನು ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಸದ್ದಿಲ್ಲದೆ ಮಾಡುತ್ತಿದ್ದಾರೆ ನಿರ್ದೇಶಕ ಪಿ. ಶೇಷಾದ್ರಿ. ‘ಈ ಪುಸ್ತಕದ ಆಡಿಯೊ ಕೆಲಸ ಅರ್ಧದಷ್ಟು ಆಗಿದೆ. ಈ ತಿಂಗಳ ಅಂತ್ಯದೊಳಗೆ ಪೂರ್ಣವಾಗಲಿದೆ. ಜುಲೈ ತಿಂಗಳಲ್ಲಿ ಕೇಳುಗರ ಕೈಸೇರಲಿದೆ ಆವರಣದ ಆಡಿಯೊ ಪುಸ್ತಕ’ ಎನ್ನುತ್ತಾರೆ ಅವರು.

‘ನಟಸುಚೇಂದ್ರಪ್ರಸಾದ್ ಮತ್ತು ನಟಿ ನಂದಿನಿ ವಿಠ್ಠಲ್ (‘ಮೂಕಜ್ಜಿಯ ಕನಸುಗಳು’ ಚಿತ್ರದ ಸೀತೆ ಪಾತ್ರಧಾರಿ) ಅವರು ಈ ಆಡಿಯೊ ಪುಸ್ತಕಕ್ಕೆ ಧ್ವನಿ ನೀಡಿದ್ದಾರೆ. ಒಂದೊಂದು ಅಧ್ಯಾಯಕ್ಕೆ ಒಬ್ಬೊಬ್ಬರು ಕಂಠದಾನ ಮಾಡಿದ್ದಾರೆ. ಒಂದೊಂದು ಪಾತ್ರಕ್ಕೆ ಪ್ರತ್ಯೇಕವಾಗಿ ಕಲಾವಿದರಿಂದ ಧ್ವನಿ ಕೊಡಿಸಿದ್ದರೆ ರೇಡಿಯೊ ನಾಟಕವಾಗುವ ಸಾಧ್ಯತೆ ಇದ್ದ ಕಾರಣಕ್ಕೆ ಆ ರೀತಿ ಪ್ರಯೋಗಕ್ಕೆ ಕೈಹಾಕಲಿಲ್ಲ. ಓದಿನ ಸುಖಕ್ಕೆ ಧಕ್ಕೆಯಾಗದಂತೆ ಕಾದಂಬರಿ ಮನಸಿನೊಳಗೆ ಇಳಿಯಬೇಕೆನ್ನುವ ಕಾರಣಕ್ಕೆ ಈ ಇಬ್ಬರ ಧ್ವನಿಯನ್ನು ಮಾತ್ರ ಕೊಡಲಾಗಿದೆ’ ಎಂದು ವಿವರಿಸಿದರು.

ಗಾಂಧಿ ಕುರಿತ ಚಿತ್ರ ‘ಮೋಹನದಾಸ’ನ ಕಡೆ ಮಾತು ಹೊರಳಿಸಿದ ಅವರು, ‘ಈ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು ಈಗಾಗಲೇ ವಿದ್ಯಾರ್ಥಿ ಸಮೂಹಕ್ಕೆ ಅಲ್ಲಲ್ಲಿ ತೋರಿಸಿದ್ದೇವೆ. ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಸಿದ್ಧತೆ ನಡೆಸಿದ್ದೆವು. ಅಷ್ಟರಲ್ಲಿ ಕೊರೊನಾ ಲಾಕ್‌ಡೌನ್ ಹೇರಿಕೆಯಾಗಿ ಬಿಡುಗಡೆಗೆ ತೊಡಕಾಯಿತು. ಹಾಗೆಯೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶಿಸುವ ನಮ್ಮ ಆಸೆಗೂ ಸದ್ಯ ಕೊರೊನಾ ತಣ್ಣೀರೆರಚಿದೆ. ಕೊರೊನಾ ಮಹಾಮಾರಿ ತೊಲಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಬೇಕು. ಚಿತ್ರೋದ್ಯಮದ ಚಟುವಟಿಕೆಗಳು ಪುನಃ ಹಳಿಗೆ ಬರಲಿ ಎನ್ನುವ ಆಶಯ ನಮ್ಮದು’ ಎಂದರು ಶೇಷಾದ್ರಿ.

‘ಆವರಣ’ ಪುಸ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.