ಬೆಂಗಳೂರು: ಮಾಂಟ್ರಿಯಲ್ನ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವದಲ್ಲಿ ಕವಿತಾ ಲಂಕೇಶ್ ನಿರ್ದೇಶನದ ‘ಗೌರಿ‘ ಸಾಕ್ಷ್ಯಚಿತ್ರಕ್ಕೆ ‘ಅತ್ಯುತ್ತಮ ದೀರ್ಘ ಸಾಕ್ಷ್ಯಚಿತ್ರ’ ಪ್ರಶಸ್ತಿ ಲಭಿಸಿದೆ.

2017ರಲ್ಲಿ ಹತ್ಯೆಗೊಳಗಾದ ಪತ್ರಕರ್ತೆ ಗೌರಿ ಲಂಕೇಶ್ ಕುರಿತು ಅವರ ಸಹೋದರಿ ಕವಿತಾ ಅವರು ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದ್ದರು. ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ‘ಆಲ್ ದಟ್ ಬ್ರೀಥ್ಸ್’ ಸಾಕ್ಷ್ಯಚಿತ್ರವೂ ಈ ಸ್ಪರ್ಧೆಯಲ್ಲಿದ್ದು, ‘ರನ್ನರ್ ಅಪ್’ ಪ್ರಶಸ್ತಿ ಪಡೆದಿದೆ.

‘ಆಮ್ಸ್ಟರ್ಡ್ಯಾಮ್ನ ಫ್ರೀ ಪ್ರೆಸ್ ಅನ್ಲಿಮಿಟೆಡ್‘ ಗೌರಿ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಹಕರಿಸಿತ್ತು. ವೃತ್ತಿಪರ ಸೇವೆಯ ಕಾರಣದಿಂದಾಗಿ ಹಿಂಸಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಲು ಸಂಸ್ಥೆ ಕೋರಿತ್ತು. ಸುಮಾರು 300 ಪ್ರಸ್ತಾವನೆಗಳು ಬಂದಿದ್ದವು. ಆಯ್ಕೆಯಾದ ನಾಲ್ಕು
ಚಿತ್ರಗಳಲ್ಲಿ ‘ಗೌರಿ’ ಸಾಕ್ಷ್ಯಚಿತ್ರವೂ ಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.