ಬಾಲಿವುಡ್ ನಟ ಅಕ್ಷಯ್‌ಕುಮಾರ್ ನಿನ್ನೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಮೂಲಗಳ ಪ್ರಕಾರ ಅಕ್ಷಯ್ ತಮ್ಮ ಮುಂದಿನ 'ರಾಮ ಸೇತು’ ಸಿನಿಮಾ ಕುರಿತು ಯೋಗಿ ಅವರ ಜೊತೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಟ್ರಿಡೆಂಟ್ ಹೋಟೆಲ್‌ನಲ್ಲಿ ರಾತ್ರಿ ಊಟದ ವೇಳೆಗೆ ಯೋಗಿ ಅವರನ್ನು ಭೇಟಿ ಮಾಡಿದ್ದರು ಅಕ್ಷಯ್.

ಅಭಿಷೇಕ್ ಶರ್ಮಾ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು ಸಿನಿಮಾವು ರಾಮ ಸೇತುವೆ ಕಟ್ಟಿದ ಕಥೆಯನ್ನು ಹೊಂದಿದೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಫಿಲ್ಮ್ ಸಿಟಿ ಸ್ಥಾಪನೆಯ ವಿಷಯಕ್ಕೆ ಸಂಬಂಧಿಸಿ ಯೋಗಿ ಅವರೇ ಅಕ್ಷಯ್ ಅವರನ್ನು ಭೇಟಿಗೆ ಕರೆದಿದ್ದರು ಎನ್ನಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುವ ಯೋಜನೆಯ ಕುರಿತು ಚರ್ಚಿಸಲು ಯೋಗಿ ಆದಿತ್ಯನಾಥ್ ಬಾಲಿವುಡ್ ಚಲನಚಿತ್ರ ನಿರ್ಮಾಪಕರ ನಿಯೋಗವನ್ನು ಬುಧವಾರ ಭೇಟಿಯಾಗಲಿದ್ದಾರೆ ಎಂದು ಬಾಲಿವುಡ್ ನಿರ್ಮಾಪಕ ರಾಹುಲ್ ಮಿತ್ರ ಈ ಹಿಂದೆ ಪಿಟಿಐಗೆ ತಿಳಿಸಿದ್ದರು.

ಕಳೆದ ಸೆಪ್ಟೆಂಬರ್‌ನಲ್ಲಿ ನೋಯ್ಡಾದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಕುರಿತು ಹೇಳಿದ್ದರು ಉತ್ತರಪ್ರದೇಶ ಮುಖ್ಯಮಂತ್ರಿ.

ಸುಭಾಷ್ ಘಾಯ್, ಬೋನಿ ಕಪೂರ್, ರಾಜ್‌ಕುಮಾರ್ ಸಂತೋಷಿ, ಸುಧೀರ್ ಮಿಶ್ರಾ, ರಮೇಶ್ ಸಿಪ್ಪಿ, ತಿಗ್ಮಾಂಶು ಧುಲಿಯಾ, ಮಧು ಭಂಡಾರ್‌ಕಾರ್, ಉಮೇಶ್ ಶುಕ್ಲಾ, ಟಿ–ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್, ಸಿದ್ಧಾರ್ಥ ರಾಯ್ ಕಪೂರ್ ಮುಂತಾದವರನ್ನು ಚರ್ಚೆಗೆ ಆಹ್ವಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.