ಮುಂಬೈ: ಬಾಲಿವುಡ್‌ನಲ್ಲಿ ನಟಿ ಆಲಿಯಾ ಭಟ್ ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ರೇಷ್ಮೆ ಸೀರೆಯುಟ್ಟು ಶ್ವೇತವಸ್ತ್ರಧಾರಿಯಾಗಿ ಕಾಣಿಸಿಕೊಂಡಿದ್ದು, ಪೋಸ್ಟರ್ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಆಲಿಯಾ ಭಟ್ ನಟನೆಯ ಹೊಸ ಚಿತ್ರ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು.

ಚಿತ್ರದಲ್ಲಿ ರೆಟ್ರೊ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಆಲಿಯಾ, ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ... ಹೊಸ ಫೋಟೊ ಹಂಚಿಕೊಂಡ ಕಾಜಲ್ ಅಗರ್ವಾಲ್: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಆಲಿಯಾ ಧರಿಸಿರುವ ಸೀರೆ ಬೆಲೆ ಎಷ್ಟಿರಬಹುದು ಎಂಬ ಚರ್ಚೆ ಆರಂಭವಾಗಿತ್ತು. ಈ ಕುರಿತು ಸ್ಪಷ್ಟನೆ ಕೊಟ್ಟಿರುವ ವಸ್ತ್ರವಿನ್ಯಾಸಕಿ ಪುನಿತ್ ಬಾಲಾನಾ, ‘ಆಲಿಯಾ ಧರಿಸಿರುವ ರೇಷ್ಮೆ ಸೀರೆಯ ಬೆಲೆ ₹37,000 ಆಗಿದೆ’ ಎಂದಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ತೆರೆಕಾಣಲು ಸಜ್ಜಾಗಿದ್ದು, ಫೆಬ್ರುವರಿ 25ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ಪೆನ್ ಮೂವಿಸ್ ಪ್ರಕಟಿಸಿದೆ.

ಮುಂಬೈನ ಕಾಮಾಟಿಪುರದ ಗಂಗೂಬಾಯಿ ಕೋಠೆವಾಲಿ ಎಂಬ ಮಹಿಳೆಯ ಜೀವನದ ಕಥೆಯನ್ನು ಒಳಗೊಂಡಿರುವ ಹುಸೈನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಆಧರಿಸಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನಿರ್ಮಿಸಲಾಗಿದೆ.

ಸಿನಿಮಾದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಮತ್ತು ಡಾ.ಜಯಂತಿಲಾಲ್ ಗಾಡಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಓದಿ... ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಫೆ.25ಕ್ಕೆ ತೆರೆಗೆ

ಓದಿ... ಕ್ರಿಕೆಟ್ ತೊರೆಯುವಂತೆ ಕೂಗು: ಸಿರಾಜ್ಗೆ ಧೋನಿ ನೀಡಿದ ಸಲಹೆ ಏನು ಗೊತ್ತಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.