2024ನೇ ಸಾಲಿನ 77ನೇ ಆವೃತ್ತಿಯಲ್ಲಿ ಮುಂಬೈನ ಪಾಯಲ್ ಕಪಾಡಿಯಾ ಅವರ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ (ಮಲಯಾಳ–ಹಿಂದಿ ಭಾಷೆ) ಚಿತ್ರವು ‘ಗ್ರ್ಯಾಂಡ್ ಪ್ರಿಕ್ಸ್’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ADVERTISEMENT
‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ಗೆ ‘ಗ್ರ್ಯಾಂಡ್ ಪ್ರಿಕ್ಸ್’ ಗರಿ: ಪ್ರಶಸ್ತಿಯೊಂದಿಗೆ ಕನಿ ಕುಸ್ರುದಿ, ಛಾಯಾ ಕದಮ್, ಪಾಯಲ್ ಕಪಾಡಿಯಾ ಮತ್ತು ದಿವ್ಯಾ ಪ್ರಭಾ
‘ಗ್ರ್ಯಾಂಡ್ ಪ್ರಿಕ್ಸ್’ ಪ್ರಶಸ್ತಿ ಕಾನ್ ಚಿತ್ರೋತ್ಸವದಲ್ಲಿನ ಮುಖ್ಯ ವರ್ಗದ ಒಂದು ಪ್ರಶಸ್ತಿಯಾಗಿದೆ
ಪಾಯಲ್ ಕಪಾಡಿಯಾ ಅವರಿಗೆ ಕಾನ್ ಚಿತ್ರೋತ್ಸವ ಹೊಸದಲ್ಲ. ಅವರ ‘ನೈಟ್ ಆಫ್ ನೋಯಿಂಗ್ ನಥಿಂಗ್’ ಸಾಕ್ಷ್ಯಚಿತ್ರಕ್ಕೆ 2021ರ ಚಿತ್ರೋತ್ಸವದಲ್ಲಿ ‘ಗೋಲ್ಡನ್ ಐ’ ಪ್ರಶಸ್ತಿ ದೊರೆತಿತ್ತು.
2017ರ ಆವೃತ್ತಿಯಲ್ಲಿ ಪಾಯಲ್ ಅವರ ‘ಆಫ್ಟರ್‌ನೂನ್ ಕ್ಲೌಡ್ಸ್’ ಕಿರುಚಿತ್ರವು ‘ಲಾ ಸಿನೆಫ್’ ವರ್ಗದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿತ್ತು.
ಈಗ ಪಾಯಲ್ ಅವರ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ ಚಿತ್ರಕ್ಕೆ ದೊರೆತಿರುವುದೂ ಕಾನ್ ಚಿತ್ರೋತ್ಸವದ ಅತ್ಯುನ್ನತ ಎರಡನೇ ಚಿತ್ರ ಎಂಬ ಪ್ರಶಸ್ತಿಯಾಗಿದೆ
ಪಾಯಲ್ ಮತ್ತು ಅವರ ತಂಡದ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯ ವ್ಯಕ್ತಿಗಳು ಅಭಿನಂದಿಸಿದ್ದಾರೆ
ಪ್ರಶಸ್ತಿ ಗೆದ್ದ ಬಳಿಕ ಪಾಯಲ್ ಅವರು ತಂಡದೊಂದಿಗೆ ಸಂಭ್ರಮಿಸಿದ ಕ್ಷಣ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಹೀಗೆ