ಧನಂಜಯ ನಟನೆಯ ಜೀಬ್ರಾ ಚಿತ್ರ ಇಂದು (ನ.22) ತೆರೆ ಕಾಣುತ್ತಿದೆ. ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಚಿತ್ರದಲ್ಲಿನ ಪಾತ್ರ ಹಾಗೂ ತಮ್ಮ ಸಿನಿಪಯಣದ ಕುರಿತು ಅವರು ಮಾತನಾಡಿದ್ದಾರೆ…

1. ಇದು ತೆಲುಗು ನಟ ಸತ್ಯದೇವ್ ಜೊತೆಗಿನ ಮಲ್ಟಿ ಸ್ಟಾರರ್ ಸಿನಿಮಾ. ಕಥೆ ಹೊಸತಾಗಿದೆ. ಬ್ಯಾಂಕಿಂಗ್ ಸಂಬಂಧಿಸಿದ ಕಥೆ. ಬ್ಯಾಂಕ್ ವ್ಯವಸ್ಥೆ ಒಳಗಿನ ಲೂಪ್ಹೋಲ್ಗಳನ್ನು ಇಟ್ಟುಕೊಂಡು ಮಾಡಿದ ಕಥೆ. ಬ್ಯಾಂಕ್ ಒಳಗಿದ್ದವರು ಮಾತ್ರ ಇಂಥ ಕಥೆ ಬರೆಯಲು ಸಾಧ್ಯ. ನಿರ್ದೇಶಕ ಈಶ್ವರ್ ಕಾರ್ತಿಕ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದವರು. ಹೀಗಾಗಿ ಅವರಿಗೆ ಅಲ್ಲಿನ ವ್ಯವಸ್ಥೆ ಬಗ್ಗೆ ತುಂಬ ಚೆನ್ನಾಗಿ ಗೊತ್ತಿತ್ತು. ಬಹಳ ಇಂಟಲಿಜೆಂಟ್ ಸ್ಕ್ರಿಪ್ಟ್. ಇದನ್ನು ಕಾಮನ್ಮ್ಯಾನ್ಗೆ ಕನ್ವೆ ಮಾಡೋದು ಕಷ್ಟ. ಆದರೇ ನಿರ್ದೇಶಕರು ಅದನ್ನು ಬಹಳ ಚೆನ್ನಾಗಿ ಕನ್ವೆ ಮಾಡಿದ್ದಾರೆ. ಅಪರೂಪಕೊಮ್ಮೆ ಇಂಥ ಸ್ಕ್ರಿಪ್ಟ್ಗಳು ಬರುತ್ತವೆ.

2. ಚಿತ್ರದಲ್ಲಿ ಆದಿ ಎಂಬ ಪಾತ್ರ ನನ್ನದು. ಸತ್ಯದೇವ್ ಮತ್ತು ನನ್ನ ಪಾತ್ರಕ್ಕೆ ಒಂದೇ ರೀತಿ ಸ್ಕ್ರೀನ್ ಸ್ಪೇಸ್ ಇದೆ. ಸೀಟಿನ ತುದಿಯಲ್ಲಿ ಕೂರಿಸುವ ಸಿನಿಮಾ. ಬ್ಯಾಂಕ್ ಸಿಸ್ಟಂ ಅನ್ನು ವಿವರಿಸುತ್ತ ಮನರಂಜನೆ ನೀಡುತ್ತದೆ.

3. ‘ಅಣ್ಣ ಫ್ರಂ ಮೆಕ್ಸಿಕೊ’ ಚಿತ್ರೀಕರಣ ನಡೆಯುತ್ತಿದೆ. ‘ಜಿಂಗೋ’ ಸ್ಕ್ರಿಪ್ಟ್ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲಿ ಶೂಟಿಂಗ್ ಪ್ರಾರಂಭವಾಗುತ್ತದೆ. ‘ಹಲಗಲಿ’ ಎಲ್ಲ ರೆಡಿ ಇದೆ. ಚಿತ್ರೀಕರಣಕ್ಕೆ ಹೊರಡಬೇಕು. ಅದಕ್ಕಾಗಿ ಸಣ್ಣ ಆಗಿದ್ದೇನೆ. ವರ್ಕೌಟ್, ಡಯಟ್ ಮಾಡುತ್ತಿದ್ದೇನೆ. ಆದಿವಾಸಿಗಳ ಕಥೆ. ಶರ್ಟ್ ಬಿಚ್ಚಿ ನಟನೆ ಮಾಡುವಾಗ ಆಡಿಯನ್ಸ್ ಎದುರು ಚೆನ್ನಾಗಿ ಕಾಣಬೇಕು. ಹೀಗಾಗಿ ಈ ಚಿತ್ರಕ್ಕೆ ಶ್ರಮ ಹೆಚ್ಚಿದೆ. ‘ಉತ್ತರಾಕಾಂಡ’ ಚಿತ್ರೀಕರಣ ಮತ್ತೆ ಪ್ರಾರಂಭಿಸಬೇಕು. ಎಲ್ಲರ ಡೇಟ್ ಸಿಗುತ್ತಿದ್ದಂತೆ ಚಿತ್ರ ಪ್ರಾರಂಭವಾಗುತ್ತದೆ. ಈಗಾಗಲೇ ಶೇಕಡ 40-50ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದ ಕುರಿತು ಹಬ್ಬಿರುವ ವದಂತಿಗಳೆಲ್ಲ ಸುಳ್ಳು. ಶಿವಣ್ಣ ಚಿಕಿತ್ಸೆ ಪಡೆದು ಬಂದ ನಂತರ ಚಿತ್ರೀಕರಣ ಪ್ರಾರಂಭಿಸುತ್ತೇವೆ. ‘ಕೆಂಪೆಗೌಡ’ ಶೀರ್ಷಿಕೆ ವಿವಾದ ನಡೆಯುತ್ತಿದೆ. ಅದು ತೀರ್ಮಾನವಾಗುತ್ತಿದ್ದಂತೆ ಚಿತ್ರೀಕರಣ ಪ್ರಾರಂಭಿಸುತ್ತೇವೆ.

4. ಚಿರಂಜೀವಿಯಂಥ ದೊಡ್ಡ ನಟರು ಮನಸಾರೆ ಶ್ಲಾಘಿಸಿದಾಗ ಖುಷಿಯಾಗುತ್ತದೆ. ಅದೊಂದು ರೀತಿ ಆಶೀರ್ವಾದ. ‘ಜೀಬ್ರಾ’ ಸಿನಿಮಾ ಕೂಡ ಚೆನ್ನಾಗಿದೆ. ಯಾರಾದರೂ ಒಬ್ಬರು ದೊಡ್ಡವರು ಸಿನಿಮಾ ರಿಸೀವ್ ಮಾಡಿಕೊಂಡಾಗ ಖುಷಿಯಾಗುತ್ತದೆ. ಜಗತ್ತಿನೆಲ್ಲೆಡೆ ಸ್ನೇಹ ಸಂಪಾದನೆ ಮಾಡಬೇಕು. ನಟರು ಎಂದಾಗ ಎಲ್ಲ ಕಡೆ ಹೋಗಿ ಕೆಲಸ ಮಾಡಬೇಕು. ಅದೇ ಬೇರೆ ರೀತಿಯ ಅನುಭವ.

5. ಕನ್ನಡದಲ್ಲಿಯೇ ಇಡೀ ದೇಶಕ್ಕೆಲ್ಲ ತಲುಪುವ ಸಿನಿಮಾ ಮಾಡಲು ದೊಡ್ಡ ಬಜೆಟ್, ಒಳ್ಳೆ ನಿರ್ಮಾಣ ಸಂಸ್ಥೆ ಬೇಕು. ನಮ್ಮ ಹಿಂದೆ ಆ ರೀತಿ ದೊಡ್ಡ ನಿರ್ಮಾಣ ಸಂಸ್ಥೆಗಳಿಲ್ಲ. ನಾವೇ ಸಣ್ಣದಾಗಿ ಸಿನಿಮಾ ಮಾಡಿಕೊಂಡು, ಒದ್ದಾಡಿಕೊಂಡು ಬರ್ತಾ ಇರಬೇಕಾದರೆ ಬೇರೆ ಭಾಷೆಯ ಒಳ್ಳೆ ಸಿನಿಮಾಗಳು ಬಂದಾಗ ಇನ್ನಷ್ಟು ಜನರನ್ನು ತಲುಪುತ್ತೇವೆ. ನಾವೆಲ್ಲೋ ಒಂಚೂರು ದೊಡ್ಡವರಾದಾಗ ದೊಡ್ಡ ದೊಡ್ಡವರು ಬಂದು ನಮ್ಮ ಜೊತೆ ಕೈಜೋಡಿಸಿ ದೊಡ್ಡ ಸಿನಿಮಾ ಆಗಬಹುದೇನೋ ಎಂಬ ಆಶಯ. ಜರ್ನಿ ಮಾಡುವುದು ತುಂಬ ಮಹತ್ವದ್ದು.

6. ಸಿನಿಮಾ ನಿರ್ಮಾಣವನ್ನು ಪ್ಯಾಷನ್ಗಾಗಿ ಮಾಡುತ್ತೇನೆ. ರಿಸ್ಕ್ ಕೆಲಸವದು. ಪ್ರತಿ ಸಲ ಸಿನಿಮಾ ಮಾಡಿ, ಅದನ್ನು ಮಾರಾಟ ಮಾಡಿ, ದುಡ್ಡು ಮರಳಿ ಪಡೆಯುವುದು ದೊಡ್ಡ ಸವಾಲಿನ ಕೆಲಸ. ಜಾಸ್ತಿ ಜನ ನಿರ್ದೇಶಕರಿದ್ದಂತೆ ಇಂಡಸ್ಟ್ರಿ ಬೆಳೆಯುತ್ತದೆ. ‘ಡೇರ್ ಡೇವಿಲ್ ಮುಸ್ತಾಫಾ’ ನಿರ್ದೇಶಕರು ‘ಜಿಂಗೊ’ದಂಥ ಕಥೆ ತಂದರು. ಎಲ್ಲೋ ಒಂದು ಕಡೆ ನಾವು ಮಾಡಿದ್ದು ವಾಪಾಸ್ ಬರುತ್ತದೆ. ಹೊಸ ತಂಡ ಬೆಳೆಸಿದರೆ, ಹೊಸ ನಿರ್ದೇಶಕರು ಬಂದಾಗ ಇನ್ನೊಂದು ನಾಲ್ಕು ಸಿನಿಮಾಗಳು ಆಗುತ್ತವೆ. ಕನ್ನಡದಲ್ಲಿ ಹೊಸ ನಿರ್ದೇಶಕರನ್ನು ಬಳಸಿಕೊಳ್ಳಬೇಕು. ಕಳೆದ ವರ್ಷ ‘ಟಗರು ಪಲ್ಯ’ ಎಲ್ಲ ವೇದಿಕೆಗಳಲ್ಲಿ ಹಿಟ್. ಆದರೆ ಆ ನಿರ್ದೇಶಕರಿಗೆ ಬೇರೆ ಯಾವುದೇ ನಿರ್ಮಾಣ ಸಂಸ್ಥೆಯಿಂದ ಮತ್ತೊಂದು ಸಿನಿಮಾ ಸಿಗದಿರುವುದು ದುರಂತ. ಸದ್ಯಕ್ಕೆ ಅವರೊಂದು ಹೊಸ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ.

7. ನಮ್ಮಲ್ಲಿ ನಿರಂತರವಾಗಿ ಸಿನಿಮಾ ಮಾಡುವ ನಿರ್ಮಾಣ ಸಂಸ್ಥೆಗಳು ಬೇಕು. ತಮಿಳು, ತೆಲುಗಿನಲ್ಲಿ ಆ ರೀತಿ ವೃತ್ತಿಪರ ನಿರ್ಮಾಣ ಸಂಸ್ಥೆಗಳಿವೆ. ನಮ್ಮಲ್ಲಿ ಅದರ ಕೊರತೆಯಿದೆ. ಹೆಚ್ಚು ಸಿನಿಮಾಗಳಾದಾಗ ಹೊಸ ತಂಡಗಳು ಬರುತ್ತವೆ. ಹೊಸ ಟ್ಯಾಲೆಂಟ್ಗಳು ಆಚೆ ಬರುತ್ತವೆ. ಉದ್ಯಮ ಬೆಳೆಯುತ್ತ ಹೋಗುತ್ತದೆ. ಉದ್ಯಮದಲ್ಲೆ ಇನ್ನಷ್ಟು ಬರಹಗಾರರು, ನಿರ್ದೇಶಕರು ಬೇಕು.

ಇಲ್ಲಿ ಕೆಲಸ ಮಾಡಿದ್ದೇನೆ

‘ನಾನು ಮೂಲತಃ ವಿಶಾಖಪಟ್ಟಣಂನವನು. ನನಗೆ ಬೆಂಗಳೂರಿನ ನಂಟಿದೆ. ಪ್ರಾರಂಭದಲ್ಲಿ ಇಲ್ಲಿ ಕೆಲ ವರ್ಷ ಕೆಲಸ ಮಾಡಿದ್ದೆ. ಬಿಟಿಎಂ ಲೇಔಟ್ನಲ್ಲಿದ್ದೆ. ಇಲ್ಲಿನ ಹಲವು ನೆನಪುಗಳು ಇನ್ನು ಹಾಗೇ ಇವೆ. ನನ್ನದು ಮತ್ತು ಡಾಲಿ ಧನಂಜಯ ಸಿನಿಮಾ ಜರ್ನಿ ಒಂದೇ ರೀತಿಯದ್ದು. ಕನ್ನಡದಲ್ಲಿಯೂ ಸಿನಿಮಾ ಮಾಡುವ ಆಸೆಯಿದೆ’ ಎನ್ನುತ್ತಾರೆ ನಟ ಸತ್ಯದೇವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.