ಬೆಂಗಳೂರು: ತಮಿಳು ಜನಪ್ರಿಯ ನಟ ದಳಪತಿ ವಿಜಯ್ ಮತ್ತು ಲಿಯೋ ಚಿತ್ರ ತಂಡದ ವಿರುದ್ಧ ಸೋಮವಾರ ದೂರು ದಾಖಲಾಗಿದೆ.

ಜೂನ್ 22 ರಂದು ಹುಟ್ಟುಹಬ್ಬದ ಅಂಗವಾಗಿ ವಿಜಯ್ ನಟಿಸಿರುವ ಲಿಯೋ ಚಿತ್ರದ ’ನಾ ರೆಡಿ’ ಎಂಬ ಹಾಡು ಬಿಡುಗಡೆಯಾಗಿತ್ತು. ಈ ಹಾಡಿಗೆ ವಿಜಯ್ ಅವರೇ ಸ್ವತಃ ಧ್ವನಿ ನೀಡಿದ್ದು, ಅಭಿಮಾನಿಗಳ ಮನಸ್ಸು ಗೆದ್ದು ಹೆಚ್ಚಿನ ವೀಕ್ಷಣೆ ಪಡೆದುಕೊಂಡಿತ್ತು. ಇದೀಗ ಈ ಹಾಡು ಚಿತ್ರ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

’ನಾ ರೆಡಿ’ ಹಾಡಿನಲ್ಲಿ ಡ್ರಗ್ಸ್ ಸೇವನೆ ಮತ್ತು ರೌಡಿಸಂ ಅನ್ನು ವೈಭವೀಕರಿಸಲಾಗಿದೆ ಎಂಬ ಆರೋಪದಡಿ ಚೆನ್ನೈ ಮೂಲದ ಸೆಲ್ವಂ ದೂರು ದಾಖಲಿಸಿದ್ದಾರೆ.

ಸೆಲ್ವಂ ಎಂಬುವವರು ಮೊದಲಿಗೆ ಜೂನ್ 25ರಂದು ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದು, ಇಂದು (ಜೂನ್ 26) ಬೆಳಿಗ್ಗೆ 10 ಗಂಟೆಗೆ ಈ ಕುರಿತಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಚಿತ್ರ ತಂಡ ಹಾಗೂ ವಿಜಯ್ ವಿರುದ್ಧ ’ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ’ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.