ನವದೆಹಲಿ: ನಟ ದೀಪ್ ಸಿಧು ಸಾವಿನ ನಂತರ ರೀನಾ ರೈ ಅವರು ಮೊದಲ ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಹರಿಯಾಣದ ಸೋನಿಪತ್‌ನ ಪಿಪ್ಲಿ ಟೋಲ್ ಸಮೀಪ ದೀಪ್ ಸಿಧು ಅವರ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಆ ಅಪಘಾತದಲ್ಲಿ ಸಿಧು ಮೃತಪಟ್ಟಿದ್ದಾರೆ.

ಪಂಜಾಬಿ ನಟಿರೀನಾ ರೈ ದೀಪ್ ಸಿಧು ಅವರ ಗರ್ಲ್‌ಫ್ರೆಂಡ್. ಅಪಘಾತ ನಡೆದಾಗ ಸಿಧು ಅವರ ಕಾರಿನಲ್ಲಿ ರೀನಾ ಸಹ ಇದ್ದರು. ರೀನಾ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಧು ಅವರನ್ನು ಅಪ್ಪಿಕೊಂಡಿರುವ ಫೋಟೊವನ್ನು ಶೇರ್ ಮಾಡಿರುವ ರೀನಾ, ‘ನಾನು ಒಳಗೆ ಸತ್ತುಹೋಗಿದ್ದೇನೆ’ ಎಂದು ನೋವು ಹಂಚಿಕೊಂಡಿದ್ದಾರೆ.

‘ನಾನೀಗ ಮುರಿದುಹೋಗಿದ್ದೇನೆ. ನಾನು ಒಳಗೆ ಸತ್ತಿದ್ದೇನೆ. ದಯವಿಟ್ಟು ನಿನ್ನ ಆತ್ಮ ಸಂಗಾತಿಯ ಬಳಿಗೆ ಹಿಂತಿರುಗಿಬಿಡು. ಈ ಜೀವಿತಾವಧಿಯಲ್ಲಿ ನನ್ನನ್ನು ಬಿಡುವುದಿಲ್ಲ ಎಂದು ನೀನು ಭರವಸೆ ನೀಡಿದ್ದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನನ್ನ ಆತ್ಮಕ್ಕೆ ಸಂಬಂಧಿಸಿದ ಹುಡುಗ ನೀನು. ನನ್ನ ಹೃದಯ ಬಡಿತ ನೀನು. ನಾನು ಇಂದು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದೇನೆ. ನಿನ್ನ ಪಿಸುಮಾತುಗಳನ್ನು ನಾನು ಕೇಳುತ್ತಿದ್ದೇನೆ’ ಎಂದು ರೀನಾ ಬರೆದುಕೊಂಡಿದ್ದಾರೆ.

'ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ನನಗೆ ತಿಳಿದಿದೆ. ನೀನು ನನ್ನೊಂದಿಗೆ ಶಾಶ್ವತವಾಗಿ ಇರುತ್ತೀಯ. ನಾವು ನಮ್ಮ ಭವಿಷ್ಯದ ಬಗ್ಗೆ ಒಟ್ಟಿಗೆ ಯೋಚಿಸುತ್ತಿದ್ದೆವು. ಈಗ ನೀನು ತೊರೆದು ಹೋದೆ. ಆದರೆ, ಆತ್ಮ ಸಂಗಾತಿಗಳು ಒಬ್ಬರನ್ನೊಬ್ಬರು ಬಿಡುವುದಿಲ್ಲ. ನಾನು ನಿನ್ನನ್ನು ಇನ್ನೊಂದು ಕಡೆಯಲ್ಲಿ ಭೇಟಿಯಾಗಲು ಬಯಸುತ್ತೇನೆ’ ಎಂದು ರೀನಾ ಬರೆದುಕೊಂಡಿದ್ದಾರೆ.

ದೀಪ್ ಸಿಧು ಅವರು ಕಳೆದ ವರ್ಷದ ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿಯಾಗಿದ್ದರು.

ಇದನ್ನೂ ಓದಿ–ಪ್ರೇಮಿಗಳ ದಿನದಂದು ಗರ್ಲ್‌ಫ್ರೆಂಡ್ ಜೊತೆಗೆ ದೀಪ್ ಸಿಧು: ವೈರಲ್ ಆಯ್ತು ಫೋಟೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.