ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಹಾಗೂ ಶ್ರದ್ಧಾ ಕಪೂರ್ ಅವರನ್ನು ವಿಚಾರಣೆ ಹಾಜರಾಗುವಂತೆ ಎನ್ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ಸುದ್ದಿಯನ್ನು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಮಾದಕ ದ್ರವ್ಯ ನಿಯಂತ್ರಣ ತನಿಖಾ ಸಂಸ್ಥೆ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಫ್ಯಾಷನ್ ಡಿಸೈನರ್ ಸೀಮೊನ್ ಕಾಂಭಟ್ಟ ಅವರನ್ನು ತನಿಖೆಗೆ ಹಾಜರಾಗುವಂತೆ ತಿಳಿಸಿದೆ ಎನ್ನಲಾಗುತ್ತಿದೆ.

ದೀಪಿಕಾ ಹಾಗೂ ಮ್ಯಾನೇಜರ್ ಕರೀಶ್ಮಾ ನಡುವಿನ ವಾಟ್ಸ್ಆ್ಯಪ್ ಚಾಟ್ಗೆ ಸಂಬಂಧಿಸಿ ಸಮನ್ಸ್ ನೀಡಲು ನಿರ್ಧರಿಸಿದೆ ಎನ್ಸಿಬಿ ತಂಡ. ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕರೀಶ್ಮಾ ಜೊತೆ 2017ರ ಅಕ್ಟೋಬರ್ನಲ್ಲಿ ಡ್ರಗ್ಸ್ಗೆ ಸಂಬಂಧಿಸಿ ದೀಪಿಕಾ ಜೊತೆ ವಾಟ್ಸ್ಆ್ಯಪ್ ಸಂವಹನ ನಡೆಸಿದ್ದರು ಎನ್ನಲಾಗುತ್ತಿದೆ.

ಟೈಮ್ ನೌ ಮಾಧ್ಯಮ ವರದಿಯ ಪ್ರಕಾರ ನಿರ್ಮಾಪಕ ಮಧು ಮಂತೆನಾ ವರ್ಮಾ ಅವರಿಗೂ ಸೆಪ್ಟೆಂಬರ್ 23ರಂದು ವಿಚಾರಣೆಗೆ ಹಾಜರಾಗುವಂತೆ ಎನ್ಸಿಬಿ ಸಮನ್ಸ್ ನೀಡಿದೆಯಂತೆ. ಮಧು ‘ಗಜಿನಿ‘, ‘ಕ್ವೀನ್‘, ‘ಸೂಪರ್ 30’ಯಂತಹ ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದರು. ಅಲ್ಲದೇ ಕರೀಶ್ಮಾ ಕೆಲಸ ಮಾಡುವ ಕಂಪನಿಯಲ್ಲೂ ಪಾಲುದಾರಿಕೆ ಹೊಂದಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:
ನನಗೆ ಗಾಂಜಾ ಬೇಡ; ಮಾಲ್ ಇದ್ರೆ ಬೇಕಿತ್ತು ಎಂದಿದ್ದ ನಟಿ ದೀಪಿಕಾ ಪಡುಕೋಣೆ
ಡಗ್ಸ್ ಪ್ರಕರಣದಲ್ಲಿ ಕೇಳಿ ಬರುತ್ತಿದೆ ದೀಪಿಕಾ ಪಡುಕೋಣೆ ಹೆಸರು
ನಟಿಯರಾದ ರಕುಲ್, ಸಾರಾ ಅಲಿ ಖಾನ್ ಕೊರಳಿಗೆ ಸುತ್ತಿಕೊಂಡ ಡ್ರಗ್ಸ್ ನಂಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.