ಬೆಂಗಳೂರು: ಕಿಶೋರ್ ಅಭಿನಯದ ‘ದೇಹಿ’ ಕನ್ನಡ ಚಲನಚಿತ್ರ ಕೋಲ್ಕತ್ತಾದಲ್ಲಿ ನಡೆದ ‘ಇಂಟರ್ ನ್ಯಾಷನಲ್ ಆರ್ಟ್ ಹೌಸ್ ಫಿಲಂ ಫೆಸ್ಟಿವಲ್’ನಲ್ಲಿ ಪ್ರದರ್ಶಿತಗೊಂಡಿದ್ದು ಆರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಉತ್ತಮ ಸಿನಿಮಾಟೊಗ್ರಫಿ, ಉತ್ತಮ ನಟಿ, ಉತ್ತಮ ಮಹಿಳಾ ಪ್ರಧಾನ ಚಿತ್ರ, ಅತ್ಯುತ್ತಮ ಸಂಗೀತ, ಉತ್ತಮ ಪ್ರಾಯೋಗಿಕ ಚಿತ್ರವಾಗಿ ಪ್ರೇಕ್ಷಕರ ಆಯ್ಕೆ, ಕಳರಿ ಪಯಟ್ಟುವಿನ ಅತ್ಯುತ್ತಮ ನಿರ್ವಹಣೆ ವಿಭಾಗಗಳಲ್ಲಿ ಸಿನಿಮಾಗೆ ಪ್ರಶಸ್ತಿ ದೊರೆತಿದೆ ಎಂದು ನಿರ್ಮಾಪಕ ರಂಜನ್ ಮುಲ್ಲಾರಟ್ ತಿಳಿಸಿದ್ದಾರೆ.

ಭಾರತದ ಪ್ರಾಚೀನ ಸಮರ ಕಲೆ ಕಳರಿ ಪಯಟ್ಟು ಆಧುನಿಕ ಭಾರತದಲ್ಲಿ ಮಹಿಳೆಯರ ಆತ್ಮರಕ್ಷಣೆಯ ಸಾಧನವಾಗಿರುವ ಕಥಾ ವಸ್ತುವನ್ನು ಈ ಚಿತ್ರ ಹೊಂದಿದೆ. ಬೆಂಗಳೂರಿನ ‘ಕಳರಿ ಗುರುಕುಲಂ’ನ ಪ್ರಧಾನ ಪೋಷಕ ರಂಜನ್ ಮುಲ್ಲಾರಟ್ ಚಿತ್ರದ ನಿರ್ಮಾಪಕರು. ಧನಾ ಈ ಚಿತ್ರದ ನಿರ್ದೇಶಕರಾಗಿದ್ದು, ನೋಬಿನ್ ಪಾಲ್ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.