ಹೈದರಾಬಾದ್: ಇಲ್ಲಿನ ಜಲಪಲ್ಲಿಯಲ್ಲಿರುವ ತೆಲುಗು ನಟ ಮೋಹನ್ ಬಾಬು ಅವರ ಮನೆಯಿಂದ ₹10 ಲಕ್ಷ ನಗದು ಕದ್ದ ಆರೋಪದ ಮೇಲೆ ಮನೆಕೆಲಸಗಾರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೋಹನ್ ಅವರ ಆಪ್ತ ಕಾರ್ಯದರ್ಶಿ ಭಾನುವಾರ ಮನೆಗೆ ಬಂದಿದ್ದರು. ಈ ವೇಳೆ ಹಣವಿದ್ದ ಬ್ಯಾಗ್ ಅನ್ನು ಕೋಣೆಯಲ್ಲಿರಿಸಿದ್ದರು. ಮನೆ ಕೆಲಸಗಾರ ಬ್ಯಾಗ್ ಕದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಯಾಗ್ನಲ್ಲಿದ್ದ ಹಣ ನಾಪತ್ತೆಯಾದ ಬಗ್ಗೆ ಪಹಾಡಿಶರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ತಿರುಪತಿಯಲ್ಲಿ ವಶಕ್ಕೆ ಪಡೆದು ಹೈದರಾಬಾದ್ಗೆ ಕರೆತಂದಿದ್ದಾರೆ. ಬುಧವಾರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯಿಂದ ₹7.36 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಉಳಿದ ಮೊತ್ತವನ್ನು ಆತ ಖರ್ಚು ಮಾಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.