ನೈಟ್ ರೋಡ್:

ಈ ಮೊದಲು ‘ನೈಸ್ ರೋಡ್’ ಶೀರ್ಷಿಕೆಯಿಂದ ವಿವಾದಕ್ಕೊಳಗಾಗಿ, ಬಳಿಕ ಶೀರ್ಷಿಕೆ ಬದಲಿಸಿಕೊಂಡ ‘ನೈಟ್ ರೋಡ್’ ಚಿತ್ರ ಇಂದು (ಸೆ.27) ತೆರೆ ಕಾಣುತ್ತಿದೆ.

ಈ ಹಿಂದೆ ‘ತಾಂಡವ’ ಚಿತ್ರವನ್ನು ನಿರ್ದೇಶಿಸಿದ್ದ ಗೋಪಾಲ್ ಹಳೇಪಾಳ್ಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಪಘಾತದಿಂದ ಮೃತಪಟ್ಟ ಯುವಕನ ಅಸಹಜ ಸಾವಿನ ತನಿಖೆಗೆ ಮುಂದಾಗುವ ನಾಯಕ ಹೇಗೆ ಆಧ್ಯಾತ್ಮದತ್ತ ವಾಲುತ್ತಾನೆ ಎಂಬುದೇ ಚಿತ್ರಕಥೆ.

ತಾರಾಗಣದಲ್ಲಿ ಧರ್ಮ, ಜ್ಯೋತಿ ರೈ, ಗಿರಿಜಾ ಲೋಕೇಶ್, ಗೋವಿಂದೇಗೌಡ(ಜಿ.ಜಿ), ರವಿಕಿಶೋರ್ ಮುಂತಾದವರಿದ್ದಾರೆ. ಸತೀಶ್ ಆರ್ಯನ್ ಸಂಗೀತ, ಪ್ರವೀಣ್ ಶೆಟ್ಟಿ ಛಾಯಾಚಿತ್ರಗ್ರಹಣ, ಜೀವನ್ ಪ್ರಕಾಶ್ ಸಂಕಲನವಿದೆ.

ಸಂಜು:

ಪ್ರೇಮ ಕಥೆಗಳಿಗೆ ಕೊನೆಯಿಲ್ಲ, ಭಾವನಾತ್ಮಕ ಸಂಬಂಧಗಳಿಗೆ ಸಾವಿಲ್ಲ, ಪ್ರಕೃತಿಗೆ ಸೋಲದ ಮನಸ್ಸಿಲ್ಲ ಎಂಬ ಕಥಾಸಾರವನ್ನು ಹೊಂದಿರುವ ಚಿತ್ರ ಸಂಜು. ನಟ, ನಿರ್ದೇಶಕ ಯತಿರಾಜ್ ಆ್ಯಕ್ಷನ್–ಕಟ್ ಹೇಳಿದ್ದಾರೆ. ಸಂತೋಷ್ ಡಿ.ಎಂ ನಿರ್ಮಾಣವಿದೆ.

‘ಹದಿಹರೆಯದಲ್ಲಿ ಬಹಳಷ್ಟು ಏರಿಳಿತ, ಸೋಲು, ಹತಾಶೆ, ಅವಮಾನ ಸಹಜ. ಕೆಲವರು ಅದನ್ನು ಸುಲಭವಾಗಿ ಮೆಟ್ಟಿ ಮುಂದೆ ಸಾಗುತ್ತಾರೆ. ಇನ್ನೂ ಕೆಲವರು ತಮಗೆ ಎದುರಾಗುವ ಘಟನೆಗಳಿಗೆ ಅಂಜಿ ಎದೆಗುಂದುತ್ತಾರೆ. ಅಂತಹ ಎರಡು ಪ್ರಸಂಗವನ್ನು ಪ್ರೀತಿಯ ಚೌಕಟ್ಟಿನಲ್ಲಿ ಹೇಳಿದ್ದೇನೆ’ ಎನ್ನುತ್ತಾರೆ ಯತಿರಾಜ್.

ಮಡಿಕೇರಿಯ ಮೂರ್ನಾಡುವಿನಲ್ಲಿ ಚಿತ್ರೀಕರಣಗೊಂಡಿದೆ. ಮನ್ವಿತ್ ಚಿತ್ರದ ನಾಯಕ. ಸಾತ್ವಿಕ ರಾವ್ ನಾಯಕಿ. ಸುಂದರಶ್ರೀ, ಸಂಗೀತ, ಬಲ ರಾಜವಾಡಿ, ಅಪೂರ್ವ ಮುಂತಾದವರು ನಟಿಸಿದ್ದಾರೆ.

ವಿದ್ಯಾ ನಾಗೇಶ್ ಛಾಯಾಚಿತ್ರಗ್ರಹಣ, ವಿಜಯ್ ಹರಿತ್ಸ ಸಂಗೀತ, ಸಂಜೀವ ರೆಡ್ಡಿ ಸಂಕಲನ ಚಿತ್ರಕ್ಕಿದೆ.

ಕೇದಾರ್ನಾಥ್ ಕುರಿಫಾರಂ:

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ಚಿತ್ರ ‘ಕೇದಾರ್ನಾಥ್ ಕುರಿಫಾರಂ’. ಜೆ.ಕೆ. ಮೂವೀಸ್ ಬ್ಯಾನರ್ನಲ್ಲಿ ಕೆ.ಎಂ.ನಟರಾಜ್ ನಿರ್ಮಿಸಿರುವ ಚಿತ್ರಕ್ಕೆ ಶೀನು ಸಾಗರ್ ನಿರ್ದೇಶನವಿದೆ.

ಶಿವಾನಿ ಅಮರ್ ಚಿತ್ರದ ನಾಯಕಿ. ಟೆನ್ನಿಸ್ ಕೃಷ್ಣ, ಕರಿಸುಬ್ಬು ಮೊದಲಾದವರು ತಾರಾಗಣದಲ್ಲಿದ್ದಾರೆ. ಸನ್ನಿ ಡಾನ್ ಅಬ್ರಾಹಂ ಸಂಗೀತ, ರಾಜೇಶ್ ತಿಲಕ್ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.