ಸನ್ನಿ ಲಿಯೋನಿ ಮತ್ತು ಶಕೀಲಾ ಹೆಸರನ್ನು ಕೇಳದ ಹರೆಯದ ಹುಡುಗರು ಇರಲಿಕ್ಕಿಲ್ಲ! ಸನ್ನಿ ಜೀವನಗಾಥೆಯ ಮೊದಲ ಸೀಸನ್ ವೆಬ್ ಸೀರಿಸ್ ರೂಪದಲ್ಲಿ ಈಗಾಗಲೇ ಬಂದಿದೆ. ಎರಡನೆಯ ಸೀಸನ್ ಇನ್ನಷ್ಟೇ ಬರಬೇಕಿದೆ. ಈ ನಡುವೆ, ಶಕೀಲಾ ಜೀವನವನ್ನು ಬಾಲಿವುಡ್ ಸಿನಿಮಾ ರೂಪದಲ್ಲಿ ಬೆಳ್ಳಿಪರದೆಯ ಮೇಲೆ ತರಲು ಅಣಿಯಾಗಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. ಶಕೀಲಾ ಪಾತ್ರವನ್ನು ರಿಚಾ ಛಡ್ಡಾ ನಿಭಾಯಿಸುತ್ತಿದ್ದಾರೆ.

ಚಿತ್ರದ ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಲು ಇಂದ್ರಜಿತ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಸಿನಿಮಾ ತಂಡದ ಸದಸ್ಯರನ್ನು ಪರಿಚಯಿಸಿದ ಇಂದ್ರಜಿತ್, ‘ಶಕೀಲಾ ಜೀವನವನ್ನು ಸಿನಿಮಾ ರೂಪದಲ್ಲಿ ತರುವ ಅವಕಾಶ ಸಿಕ್ಕಾಗ ಖುಷಿಯೂ ಆಯಿತು, ಗೊಂದಲವೂ ಆಯಿತು. ಎರಡು ದಶಕಗಳ ಅಂತರದ ನಂತರ ಕನ್ನಡದ ನಿರ್ದೇಶಕನೊಬ್ಬ ಹಿಂದಿ ಸಿನಿಮಾ ನಿರ್ದೇಶಿಸುತ್ತಿರುವುದು ಇದೇ ಮೊದಲು. ಇದೊಂದು ದೊಡ್ಡ ವೇದಿಕೆ’ ಎನ್ನುತ್ತ ಮಾತು ಆರಂಭಿಸಿದರು.

ಕನ್ನಡದ ಪ್ರತಿಭೆಗಳನ್ನೂ ಸಿನಿಮಾ ತಂಡದ ಭಾಗವಾಗಿಸಿಕೊಳ್ಳುವ ಉದ್ದೇಶದಿಂದ ಇಂದ್ರಜಿತ್ ಅವರು ಸಂದೀಪ್ ಮಲಾನಿ, ಎಸ್ತರ್ ನರೋನ್ಹಾ ಅವರನ್ನು ತಮ್ಮ ಜೊತೆ ಸೇರಿಸಿಕೊಂಡಿದ್ದಾರೆ. ಕನ್ನಡದವರಾದ ವೀರ್ ಸಮರ್ಥ್ ಈ ಚಿತ್ರದ ಎರಡು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಎಸ್ತರ್ ಅವರು ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಆದರೆ ಆ ಪಾತ್ರ ಏನು ಎಂಬುದನ್ನು ಇಂದ್ರಿಜಿತ್ ಮತ್ತು ಎಸ್ತರ್ ಗುಟ್ಟಾಗಿಯೇ ಉಳಿಸಿದ್ದಾರೆ. ಇವರ ಜೊತೆ, ಹಿಂದಿ ನಟ ಪಂಕಜ್ ತ್ರಿಪಾಠಿ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ನಡೆದಿರುವುದು ಶಕೀಲಾ ಊರಾದ ಕೇರಳದಲ್ಲಿ ಅಲ್ಲ. ಬದಲಿಗೆ ಮಲೆನಾಡಿನ ತೀರ್ಥಹಳ್ಳಿಯಲ್ಲಿ.

‘ಇದು ಶಕೀಲಾ ಜೀವನದ ಕಥೆ. ಈ ಸಿನಿಮಾದ ಕಥೆ ಬರೆಯುವ ಮೊದಲು ನಾನು ಶಕೀಲಾ ಜೊತೆ ವಿಸ್ತೃತವಾಗಿ ಮಾತುಕತೆ ನಡೆಸಿದೆ. ಕೆಲವು ಎಕ್ಸ್ಕ್ಲೂಸಿವ್ ಅಂಶಗಳೂ ಆಗ ನನಗೆ ದೊರೆತವು’ ಎಂದರು ಇಂದ್ರಜಿತ್. ‘ಚಿತ್ರೀಕರಣ ತೀರ್ಥಹಳ್ಳಿಯಲ್ಲಿ ಏಕೆ ನಡೆದಿದೆ, ಕೇರಳದಲ್ಲಿ ಏಕೆ ಅಲ್ಲ’ ಎಂಬ ಪ್ರಶ್ನೆಗೆ, ‘ಚಿತ್ರೀಕರಣಕ್ಕೆ ಸ್ಥಳ ಅಂತಿಮ ಮಾಡಲು ಕೇರಳದ ಕೆಲವೆಡೆ ಭೇಟಿ ನೀಡಿದ್ದೆವು. ಆದರೆ, ಅಲ್ಲಿನ ಮಳೆ ತೊಂದರೆ ಕೊಟ್ಟಿತು. ಹಾಗೆಯೇ, ದೃಶ್ಯ ಮಾಧ್ಯಮದಲ್ಲಿ ಕೇರಳದ ವಿವಿಧ ಪ್ರದೇಶಗಳನ್ನು ಸಾಕಷ್ಟು ಬಾರಿ ತೋರಿಸಲಾಗಿದೆ. ಹಾಗಾಗಿ ತೀರ್ಥಹಳ್ಳಿಯನ್ನು ಆಯ್ಕೆ ಮಾಡಲಾಯಿತು. ತೀರ್ಥಹಳ್ಳಿಯ ಕೆಲವು ಸುಂದರ ಸ್ಥಳಗಳನ್ನು ಇದರಲ್ಲಿ ಕಾಣಬಹುದು’ ಎಂದು ಉತ್ತರಿಸಿದರು.

ಶಕೀಲಾ ಅವರ ವೈಯಕ್ತಿಕ ಮತ್ತು ವೃತ್ತಿ ಬದುಕು, ಅವರ ಕುಟುಂಬ, ಬಾಲ್ಯ ಕೂಡ ಈ ಚಿತ್ರದ ಭಾಗ ಆಗಿರಲಿದೆಯಂತೆ. ‘ಶಕೀಲಾ ಅವರ ಜೀವನದ ಕಥೆ ಸಿನಿಮಾ ರೂಪ ಕೊಡಲಿಕ್ಕೆ ಸಿದ್ಧವಾಗಿರುವ ಚಿತ್ರಕಥೆಯೊಂದರಂತೆ ನನಗೆ ಅವರ ಜೊತೆ ಮಾತನಾಡಿದಾಗ ಅನಿಸಿತು. ಈ ಚಿತ್ರದಲ್ಲಿ ಎಲ್ಲಿಯೂ ಶಕೀಲಾ ಅವರನ್ನು ವೈಭವೀಕರಿಸಿಲ್ಲ’ ಎಂದರು ರಿಚಾ. ‘ಶಕೀಲಾ ಪಾತ್ರ ಮಾಡಲು ಇಂದ್ರಜಿತ್ ನನ್ನನ್ನು ಏಕೆ ಆಯ್ಕೆ ಮಾಡಿಕೊಂಡರು ಎಂಬುದು ಗೊತ್ತಿಲ್ಲ. ಆದರೆ ಈ ಪಾತ್ರವನ್ನು ನಾನು ನಿಭಾಯಿಸಬಲ್ಲೆ ಎಂಬ ವಿಶ್ವಾಸ ಇಂದ್ರಜಿತ್ ಅವರಲ್ಲಿ ಇದೆ’ ಎಂದು ಕಣ್ಣು ಮಿಟುಕಿಸಿದರು ರಿಚಾ. ರಿಚಾ ಅವರಿಗೆ ಶಕೀಲಾ ವ್ಯಕ್ತಿತ್ವವನ್ನು ಆವಾಹಿಸಿಕೊಳ್ಳುವುದು ತುಸು ಕಷ್ಟವೇ ಆಗಿತ್ತಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.