ನವದೆಹಲಿ: ಸುಖೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆ ಎದುರಿಸುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮೇ 31ರಿಂದ ಜೂನ್ 6ರವರೆಗೆ ವಿದೇಶಕ್ಕೆ ತೆರಳಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ.

ಅಬುಧಾಬಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ (ಐಐಎಫ್ಎ) ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ಕೋರಿ ಜಾಕ್ವೆಲಿನ್, ದೆಹಲಿಯ ಪಟಿಯಾಲ ಹೌಸ್ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ಯುಎಇ, ಫ್ರಾನ್ಸ್ ಮತ್ತು ನೇಪಾಳ ಭೇಟಿಗೂ ಅವರು ಅನುಮತಿ ಕೊರಿದ್ದರು.

ಸುಖೇಶ್ ಚಂದ್ರಶೇಖರ್ ಜೊತೆ ಸ್ನೇಹವಿರುವುದು ಪತ್ತೆಯಾದ ಬಳಿಕ ಹಲವು ಬಾರಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಇ.ಡಿ ತನಿಖೆಗೆ ಒಳಪಡಿಸಿತ್ತು.

₹ 200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸುಖೇಶ್ ಚಂದ್ರಶೇಖರ್ ಅವರನ್ನು ವಿಚಾರಣೆ ನಡೆಸುತ್ತಿರುವ ಇಡಿ, ಶ್ರೀಲಂಕಾ ನಟಿಗೆ ಆತ ನೀಡಿದ್ದ₹ 7 ಕೋಟಿ ಮೌಲ್ಯದ ಉಡುಗೊರೆಗಳು ಮತ್ತು ಆಸ್ತಿಗಳನ್ನು ಜಪ್ತಿ ಮಾಡಿತ್ತು, ಅವುಗಳನ್ನು ಅಪರಾಧದ ಆದಾಯ ಎಂದು ಇ.ಡಿ ಪರಿಗಣಿಸಿದೆ.

ನಟಿಯನ್ನು ಪರಿಚಯಿಸಿದ್ದ ಸುಖೇಶ್ ಚಂದ್ರಶೇಖರ್ ಆಪ್ತೆ ಪಿಂಕಿ ಇರಾನಿ ವಿರುದ್ಧ ಇದೇ ಫೆಬ್ರುವರಿಯಲ್ಲಿ ಜಾರಿ ನಿರ್ದೇಶನಾಲಯವು ಹೆಚ್ಚುವರಿ ದೋಷಾರೋಪಪಟ್ಟಿ ಸಲ್ಲಿಸಿತ್ತು.

ಜಾಕ್ವೆಲಿನ್ಗಾಗಿ ಪಿಂಕಿ ದುಬಾರಿ ಉಡುಗೊರೆಗಳನ್ನು ಆಯ್ಕೆ ಮಾಡುತ್ತಿದ್ದರು. ಅವುಗಳಿಗೆ ಸುಖೇಶ್ ಹಣ ಪಾವತಿಸಿದ ಬಳಿಕ ಅವುಗಳನ್ನು ಜಾಕ್ವೆಲಿನ್ ಮನೆಗೆ ಕಳುಹಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸುಖೇಶ್ ಚಂದ್ರಶೇಖರ್ ಸುಮಾರು ₹ 20 ಕೋಟಿಗಳನ್ನು ನಟಿಯರು ಮತ್ತು ಮಾಡೆಲ್ಗಳಿಗೆ ಖರ್ಚು ಮಾಡಿದ್ದಾರೆ ಎಂಬ ಆರೋಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.