ತೆಲುಗಿನ ಬ್ಲಾಕ್ ಬ್ಲಸ್ಟರ್ ‘ಅರ್ಜುನ್ ರೆಡ್ಡಿ‘ ವಿಜಯ ದೇವರಕೊಂಡ ಎಂಬ ಹೊಸ ನಟನಿಗೆ ಸ್ಟಾರ್ಗಿರಿ ತಂದುಕೊಟ್ಟ ಚಿತ್ರ. ರಿಮೇಕ್ ಚಿತ್ರಗಳು ಗೆಲ್ಲುವುದು ಅಪರೂಪ. ಆದರೆ, ‘ಕಬೀರ್ ಸಿಂಗ್’ ವಿಷಯದಲ್ಲಿ ಅದು ಸುಳ್ಳಾಗಿದೆ. ತೆಲುಗಿನ ‘ಅರ್ಜುನ್ ರೆಡ್ಡಿ’ ಹಿಂದಿಯಲ್ಲಿ ‘ಕಬೀರ್ ಸಿಂಗ್’ ವೇಷತೊಟ್ಟು ತೆರೆಗೆ ಬಂದು ಭಾರಿ ಸದ್ದು ಮಾಡುತ್ತಿದ್ದಾನೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಶಾಹಿದ್ ಕಪೂರ್ ಮರುಜೀವ ನೀಡಿದ್ದಾನೆ. ಚಿತ್ರ ಯಶಸ್ಸು ಗಳಿಸುತ್ತಲೇ ಶಾಹಿದ್ ಕಪೂರ್ ಸ್ಟಾರ್ ವ್ಯಾಲ್ಯೂ ಮತ್ತು ಸಂಭಾವನೆ ಏಕಾಏಕಿ ಏರಿದೆ.

ಸತತ ಸೋಲುಗಳಿಂದ ಕಂಗೆಟ್ಟಾಗ ತಿರುಗಿ ನೀಡದ ಬಾಲಿವುಡ್ ನಿರ್ಮಾಪಕರು ‘ಕಬೀರ್ ಸಿಂಗ್‘ ಹಿಟ್ ಆಗಿದ್ದೆ ತಡ ಶಾಹಿದ್ ಹಿಂದೆ ಬಿದ್ದಿದ್ದಾರೆ.ಶಾಹಿದ್ ಹಾಕಿಕೊಂಡು ಸಿನಿಮಾ ಮಾಡಲು ಮನೆಯ ಬಾಗಿಲಿಗೆ ಎಡತಾಕುತ್ತಿದ್ದಾರೆ. ಅದರ ಬೆನ್ನಲ್ಲೇ ಶಾಹಿದ್ ಕೂಡ ತಮ್ಮ ಸಂಭಾವನೆ ಏರಿಸಿದ್ದಾರೆ.ಒಂದು ಮೂಲದ ಪ್ರಕಾರ ಹೊಸ ಚಿತ್ರಕ್ಕೆ ಸಹಿ ಹಾಕಿದ ಶಾಹಿದ್ ₹40 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.