‘ಅಲಿಯಾ, ನೀನು ಕರಣ್ ಜೋಹರ್ನ ಕೈಗೊಂಬೆಯಂತೆ ವರ್ತಿಸಬೇಡ’ಎಂದು’ಮಣಿಕರ್ಣಿಕಾ– ದಿ ಕ್ವೀನ್ ಆಫ್ ಝಾನ್ಸಿ‘ ಕಂಗನಾ ರನೋಟ್ ಎಚ್ಚರಿಕೆ ನೀಡಿದ್ದಾರೆ.

ಇಡೀ ದೇಶವೇ ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಿರುವಾಗ ಬಾಲಿವುಡ್ ಮಾತ್ರ ಮೌನ ವಹಿಸಿ ಅವಮಾನಿಸುತ್ತಿದೆ ಎಂದು, ಚಿತ್ರ ಬಿಡುಗಡೆಯಾದಾಗಿನಿಂದಲೂ ಕಂಗನಾ ದೂರುತ್ತಿದ್ದಾರೆ.ಅಲಿಯಾ ಭಟ್ ಕೂಡಾ ತಮ್ಮ ಸಿನಿಮಾ ವೀಕ್ಷಣೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸದಿರಲು ಕಾರಣವೇನು ಎಂದು ಕಂಗನಾ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅಲಿಯಾ, ’ಕಂಗನಾಳನ್ನು ಅವಮಾನಿಸುವ ಅಥವಾ ನೋವುಂಟು ಮಾಡುವ ಉದ್ಧೇಶದಿಂದ ಸಿನಿಮಾ ನೋಡದೇ ಕೂತಿಲ್ಲ. ’ಮಣಿಕರ್ಣಿಕಾ‘ ನೋಡದಿರುವ ಬಗ್ಗೆ ಕಂಗನಾ ಅವರಲ್ಲಿ ವೈಯಕ್ತಿಕವಾಗಿ ಕ್ಷಮೆ ಕೋರಲೂ ಸಿದ್ಧ‘ ಎಂದಿದ್ದರು.

ಅಲಿಯಾ ಪ್ರತಿಕ್ರಿಯೆಯಿಂದ ಕಂಗನಾ ಸಮಾಧಾನಗೊಂಡಿಲ್ಲ. ಬದಲಾಗಿ, ಮಹಿಳಾ ಸ್ವಾವಲಂಬನೆ ಬಗ್ಗೆ ಮಾತನಾಡುವ ನಾವು ಮಹಿಳಾಪರ ಧ್ವನಿಯಿರುವ ’ಮಣಿಕರ್ಣಿಕಾ‘ದಂತಹ ಚಿತ್ರವನ್ನು ನೋಡದೆ ಸಬೂಬು ಹೇಳುವುದು ಸರಿಯಲ್ಲ. ನೀನು ಕರಣ್ ಜೋಹರ್ ಕೈಗೊಂಬೆಯಂತೆ ವರ್ತಿಸುತ್ತಿದ್ದೀಯ‘ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.