ಬಾಲಿವುಡ್ ನಟಿ ಕಂಗನಾ ರನೌತ್, ಸಿನಿಮಾಗಳಿಗಿಂತ ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಇಂಡಿಯಾ ಹೆಸರನ್ನು ಬದಲಿಸಿಎಂದು ಒತ್ತಾಯಿಸುವ ಮೂಲಕ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ಗುಲಾಮರು ಇಟ್ಟಿರುವ ಇಂಡಿಯಾ ಹೆಸರನ್ನು ಬದಲಾವಣೆ ಮಾಡಿ, ಭಾರತ್ ಎಂದು ಮರುನಾಮಕರಣ ಮಾಡಬೇಕು ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂಡಿಯಾ ಎಂಬುದು ಬ್ರಿಟಿಷರ ನೀಡಿದ ಹೆಸರು ಇದನ್ನು ಬದಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಪೋಸ್ಟ್ನಲ್ಲಿ ‘ಭಾರತ್’ ಅರ್ಥದ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಭಾರತ್ ಎಂಬುದು ಮೂರು ಸಂಸ್ಕೃತ ಅಕ್ಷರಗಳಿಂದ ಕೂಡಿದ ಪದವಾಗಿದೆ. ಭಾ( ಭಾವ್), ರ(ರಾಗ್), ತ( ತಾಳ್) ಪದಗಳಿಂದ ಭಾರತ್ ಆಗಿದೆ. ಭಾವ, ರಾಗ, ತಾಳಗಳಿದ ಕೂಡಿರುವುದೇ ಭಾರತ (Bha -Bhav, Ra-Rag,Ta-Tal) ಎಂದು ಕಂಗನಾ ವಿವರಣೆ ನೀಡಿದ್ದಾರೆ.

ಯೋಗ, ಗೀತಾ, ವೇದಗಳಲ್ಲೂ ಭಾರತದ ಹೆಸರು ಪ್ರಸ್ತಾಪವಾಗಿದೆ. ಜಗತ್ತಿಗೆ ಹೊಸ ನಾಗರೀಕತೆಯನ್ನು ಕೊಟ್ಟ ಭಾರತೀಯರು, ಬ್ರಿಟಿಷರು ಇಟ್ಟ ಹೆಸರನ್ನು ತೆಗೆದು ಭಾರತ್ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕಂಗನಾ ಅವರ ಈ ಪೋಸ್ಟ್ಗೆ ಅಭಿಮಾನಿಗಳಿಂದಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಎಂದು ಕರೆಯುವುದೇ ಚೆನ್ನಎಂದು ಕಮೆಂಟ್ಗಳನ್ನು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.