ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪಂಗಾ’ದಲ್ಲಿ ಕಂಗನಾ

Published : 23 ಆಗಸ್ಟ್ 2018, 19:30 IST
ಫಾಲೋ ಮಾಡಿ
Comments

ಗುಂಗುರು ಕೂದಲ ಸುಂದರಿ ಕಂಗನಾ ರನೋಟ್‌ ‘ಮಣಿಕರ್ಣಿಕಾ’ ಚಿತ್ರೀಕರಣವನ್ನು ಈಗಷ್ಟೇ ಮುಗಿಸಿಕೊಟ್ಟಿದ್ದಾರೆ. ಅಷ್ಟರಲ್ಲೇ, ಅಶ್ವಿನಿ ಅಯ್ಯರ್‌ ತಿವಾರಿ ಅವರು ತಮ್ಮ ಹೊಸ ಚಿತ್ರ ‘ಪಂಗಾ’ದ ನಾಯಕಿ ಕಂಗನಾ ಎಂದು ಮಂಗಳವಾರ ಪ್ರಕಟಿಸಿದ್ದಾರೆ.

ಅಶ್ವಿನಿ ಅಯ್ಯರ್‌ ತಿವಾರಿ ಅವರ ಚಿತ್ರಕ್ಕಾಗಿ ಕಂಗನಾ ಕಬಡ್ಡಿ ಆಟದ ತಂತ್ರಗಾರಿಕೆಗಳನ್ನು ಕಲಿಯುತ್ತಿರುವುದಾಗಿ ಈ ಹಿಂದೆ ಸುದ್ದಿಯಾಗಿತ್ತು. ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರ ಪ್ರೊಫೈಲ್‌ಗಳನ್ನೂ ಅಶ್ವಿನಿ ಒಂದಷ್ಟು ದಿನ ತಿರುವಿ ಹಾಕಿದ್ದರು. ಇವೆರಡೂ ‘ಪಂಗಾ’ ಸಿನಿಮಾದ ತಯಾರಿಯೇ ಆಗಿದ್ದವು ಎಂಬುದು ಈಗ ಖಚಿತವಾಗಿದೆ.

‘ಪಂಗಾ’ದ ಬಗ್ಗೆ ಅಶ್ವಿನಿ ಟ್ವಿಟರ್‌ನಲ್ಲಿ ಬರೆದುಕೊಂದ್ದು ಒಂದು ನಿಮಿಷದ ವಿಡಿಯೊ ಕೂಡಾ ಅಪ್‌ಲೋಡ್‌ ಮಾಡಿದ್ದಾರೆ. ‘ನನ್ನ ಈಗಿನ ವಾಸ್ತವವು ನನ್ನ ಪ್ರೀತಿಪಾತ್ರರು ನನ್ನ ಮೇಲಿಟ್ಟ ನಂಬಿಕೆಯ ಪ್ರತಿಬಿಂಬ; ಕುಟುಂಬವನ್ನು ಹೊಂದಿರುವ ನನ್ನ ತಂಡದಿಂದಾಗಿ ಈ ವಾಸ್ತವ ನನಗೆ ದಕ್ಕಿದೆ. ‘ಪಂಗಾ’ವನ್ನು ನಿಮಗೆ ಕೊಡುತ್ತಿದ್ದೇನೆ. ಫಾಕ್ಸ್‌ ಸ್ಟಾರ್‌ ಹಿಂದಿ ನಿರ್ಮಾಣದಲ್ಲಿ ಸಿನಿಮಾ ಮೂಡಿಬರಲಿದೆ. ಕಂಗನಾ ರನೋಟ್‌, ಜೆಸ್ಸಿ ಗಿಲ್‌, ನೀನಾ ಗುಪ್ತಾ ನಟಿಸಲಿದ್ದಾರೆ’ ಎಂದು.

ಹೊಸ ತಲೆಮಾರಿನ ಕುಟುಂಬದ ಕತೆಯನ್ನು ಹೇಳುತ್ತದೆ ‘ಪಂಗಾ’. ಕಬಡ್ಡಿ ಆಟದ ಪಟ್ಟುಗಳನ್ನು ಕಲಿತಿರುವ ಕಂಗನಾಗೆ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿಯಾಗಿ ನಟಿಸುವುದು ಹೊಸ ಅನುಭವವಾಗಲಿದೆಯಂತೆ. ‘ನಿಜಜೀವನದಲ್ಲಿ ನನ್ನ ಕುಟುಂಬ ನನ್ನೆಲ್ಲ ಕನಸುಗಳಿಗೆ ನೀರೆರೆದು, ಕಷ್ಟಕಾಲದಲ್ಲಿಯೂ ಬೆನ್ನೆಲುಬಾಗಿ ನಿಂತಿದೆ. ಈ ಸಿನಿಮಾ ನನಗೆ ಬಹಳ ಮುಖ್ಯವೆನಿಸುತ್ತದೆ. ಬದುಕಿನ ಸಣ್ಣ ಕದಲಿಕೆಗಳನ್ನೂ ರಸವತ್ತಾಗಿ ಕಟ್ಟಿಕೊಡುವ ಕಲೆಗಾರ್ತಿ ಅಶ್ವಿನಿ ಅವರೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತಿದೆ’ ಎಂದು ಕಂಗನಾ ಹೇಳಿಕೊಂಡಿದ್ದಾರೆ. ‘ಪಂಗಾ’ದ ವಿಡಿಯೊದಲ್ಲಿ ಮೂವರೂ ನಟರ ಕುಟುಂಬದ ಚಿತ್ರವನ್ನೂ ಹಾಕಿರುವುದು, ಚಿತ್ರಕ್ಕೆ ಕೌಟುಂಬಿಕ ಬದುಕಿನ ಚೌಕಟ್ಟನ್ನು ಒದಗಿಸಿದೆ. ‘ಪಂಗಾ’, ಮುಂದಿನ ವರ್ಷ ತೆರೆ ಕಾಣಬೇಕೆನ್ನುವುದು ಅಶ್ವಿನಿ ಅಯ್ಯರ್‌ ತಿವಾರಿ ಲೆಕ್ಕಾಚಾರ.

v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT