ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಾವು ಸಾಗಿಬಂದಸಿನಿ ಪಯಣದಬಗ್ಗೆ ನಟಿ ಶಾನ್ವಿ ಶ್ರೀವಾಸ್ತವ ಅವರು ಇನ್‌ಸ್ಟಾಗ್ರಾಂನಲ್ಲಿ ಪತ್ರವೊಂದನ್ನು ಬರೆದಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದೆ.

ಪತ್ರದಲ್ಲಿ ಏನಿದೆ?

ಓಂಪ್ರಕಾಶ್ ರಾವ್ ನಿರ್ದೇಶನದ ‘ಚಂದ್ರಲೇಖ’ ಎಂಬ ಹಾರರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದೆ. ಚಿತ್ರದ ಚಿತ್ರೀಕರಣ ನಡೆಯುವಾಗ ಆರಂಭದಲ್ಲಿ ಕನ್ನಡ ಭಾಷೆ ಕಷ್ಟಕರವೆನಿಸಿತ್ತು. ಚಿತ್ರದಲ್ಲಿ ದೆವ್ವದ ಪಾತ್ರ ನಿರ್ವಹಿಸಿದ್ದರಿಂದ ’ಸ್ವೀಟ್ ಗೋಸ್ಟ್‘ ಎಂದು ಹೆಸರು ಬಂತು.
ನಂತರ ’ಮಾಸ್ಟರ್ ಪೀಸ್‘ ಬಂದ ಬಳಿಕ ‘ನಾಗವಲ್ಲಿ‘ ಎಂದು ಹೆಸರು ಬಂತು. ಎಲ್ಲರಿಗೂ ನನ್ನ ಡಾನ್ಸ್ ಇಷ್ಟವಾಯಿತು. ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ಆದರೆ, ನಿಧಾನವಾಗಿ ನನ್ನಲ್ಲಿ ಆತ್ಮವಿಶ್ವಾಸ ಮೂಡಿತು.

ಸಾಹೇಬ, ಮಫ್ತಿ, ತಾರಕ್ ಸೇರಿದಂತೆ ಗೀತಾ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸದ್ಯ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದು, ನನ್ನ ಪಾತ್ರಕ್ಕಾಗಿ 55 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ಡಬ್ಬಿಂಗ್‌ಗಾಗಿ 15 ದಿನ ತೆಗೆದುಕೊಂಡಿದ್ದೆ. ಚಿತ್ರತಂಡ ನನ್ನನ್ನು ಕುಟುಂಬದವರಂತೆ ನೋಡಿಕೊಂಡಿತು.

'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಲಕ್ಷ್ಮಿಪಾತ್ರದಲ್ಲಿ ನಿಮ್ಮ ಮುಂದೆ ಬರುತ್ತೇನೆ. ನಿಮ್ಮ ಪ್ರೀತಿ ನನ್ನ ಮೇಲೆ ಸದಾ ಹೀಗೆ ಇರಲಿ... ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.