ನವದೆಹಲಿ: ಬುಧವಾರ (ಸೆ.21ರಂದು) ನಿಧನರಾದ ಬಾಲಿವುಡ್ನ ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಅವರನ್ನು ನೆನೆದು ಕಪಿಲ್ ಶರ್ಮಾ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

ರಾಜು ಅವರೊಂದಿಗಿನ ಹಳೇ ಚಿತ್ರವೊಂದನ್ನು ಹಂಚಿಕೊಂಡಿರುವ ಶರ್ಮಾ, 'ನೀವು ಇಂದು ಇದೇ ಮೊದಲ ಬಾರಿಗೆ ನಾನು ಅಳುವಂತೆ ಮಾಡಿದ್ದೀರಿ ರಾಜು ಅಣ್ಣ. ನಾವು ಮತ್ತೊಮ್ಮೆ ಭೇಟಿಯಾಗಬಹುದೆಂದು ಬಯಸಿದ್ದೆ. ದೇವರ ದಯೆ ಇರಲಿ. ನೀವು ಸದಾ ನೆನಪಿನಲ್ಲಿ ಉಳಿಯುತ್ತೀರಿ. ವಿದಾಯಗಳು, ಓಂ ಶಾಂತಿ' ಎಂದು ಬರೆದುಕೊಂಡಿದ್ದಾರೆ.

ರಾಜು ಅವರಿಗೆ58 ವರ್ಷ ವಯಸ್ಸಾಗಿತ್ತು.ಹೃದಯಾಘಾತಕ್ಕೆ ಒಳಗಾಗಿದ್ದ ಅವರುಆಗಸ್ಟ್ 10ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ರಾಜು ಶ್ರೀವಾಸ್ತವ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದ ಏಮ್ಸ್ ವೈದ್ಯರು,ರಾಜು ಅವರಆರೋಗ್ಯ ಸ್ಥಿತಿ ಗಂಭೀರವಾಗಿತ್ತು.ಮಿದುಳು ನಿಷ್ಕ್ರಿಯಗೊಂಡಿತ್ತು. ಅವರಿಗೆ ತ್ರೀವಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿಸಿದ್ದರು.

ನಟನ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇವನ್ನೂ ಓದಿ
*ಹಾಸ್ಯ ನಟರಾಜು ಶ್ರೀವಾಸ್ತವ ನಿಧನ: ಅಭಿಮಾನಿಗಳ ಕಂಬನಿ
*ರಾಜು ಶ್ರೀವಾಸ್ತವ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.