ಜನಪ್ರಿಯ ಹಾಸ್ಯ ನಟ ಕಪಿಲ್ ಶರ್ಮಾ ಅವರ ಜೊತೆ ಕೆಲಸ ಮಾಡಿದ್ದ ನಟ ತೀರ್ಥಾನಂದ ರಾವ್ ಫೇಸ್ಬುಕ್ ಲೈವ್ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

2016ರಲ್ಲಿ ತೀರ್ಥಾನಂದ ರಾವ್ ಅವರು ಕಪಿಲ್ ಶರ್ಮಾ ಅವರೊಂದಿಗೆ 'ಕಾಮಿಡಿ ಸರ್ಕಸ್ ಕೆ ಅಜೂಬೆ' ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಜೂನಿಯರ್ ನಾನಾ ಪಟೇಕರ್ ಪಾತ್ರ ನಿರ್ವಹಿಸಿ ಶಹಬ್ಬಾಸ್ ಗಿರಿ ಪಡೆದಿದ್ದರು. ಗುಜರಾತಿ ಸಿನಿಮಾದ ಕಾರಣಕ್ಕೆ ಕಾಮಿಡಿ ಶೋ ತೊರೆದಿದ್ದರು.

ತಮ್ಮ ಆತ್ಮಹತ್ಯೆಗೆ ಪ್ರೇಯಸಿಯೇ ಕಾರಣ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತೀರ್ಥಾನಂದ, ಫೇಸ್ಬುಕ್ ಲೈವನಲ್ಲಿಯೇ ಕೀಟನಾಶಕ ಕುಡಿದಿದ್ದಾರೆ. ವಿಷಯ ತಿಳಿದ ಸ್ನೇಹಿತರು ತಕ್ಷಣ ತೀರ್ಥಾನಂದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್ ತಿಂಗಳಿಂದ ಹುಡುಗಿಯೊಬ್ಬರ ಜೊತೆ ಸಂಬಂಧ ಹೊಂದಿದ್ದು ಆಕೆಯಿಂದಲೇ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುವುದಾಗಿ ಲೈವ್ನಲ್ಲಿ ತಿಳಿಸಿದ್ದಾರೆ.

‘ಆಕೆ ನನ್ನ ಮೇಲೆ ಪೊಲೀಸ್ ದೂರು ನೀಡಿದ್ದು, ಮದುವೆಯಾಗುವಂತೆ ಬೆದರಿಕೆ ಒಡ್ಡಿದ್ದಾಳೆ. ನಾನು ಸಾಲಗಾರನಾಗಿದ್ದು, ಆಕೆಯೇ ನನ್ನ ಮನಸ್ಥಿತಿ ಮತ್ತು ಹಣಕಾಸಿನ ಸ್ಥಿತಿಗೆ ಕಾರಣ‘ ಎಂದು ದೂರಿದ್ದಾರೆ.

ತೀರ್ಥಾನಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಲಾಕ್ಡೌನ್ ಸಮಯದಲ್ಲೂ ಹಣಕಾಸಿನ ವಿಷಯಕ್ಕೆ ತೀರ್ಥಾನಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.