ಮುಂಬೈ: 'ನನ್ನ ಕಿರಿಯ ಮಗ ಜಹಾಂಗೀರ್ ಆಸ್ಕರ್ ಪ್ರಶಸ್ತಿ ಪಡೆದ 'ನಾಟು ನಾಟು' ಹಾಡಿಗೆ ನೃತ್ಯ ಮಾಡಲು ಇಷ್ಟಪಡುತ್ತಾನೆ' ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹೇಳಿದ್ದಾರೆ.

ಟಾಕ್ ಶೋ 'ವಾಟ್ ವುಮೆನ್ ವಾಂಟ್' ತನ್ನ ನಾಲ್ಕನೇ ಆವೃತ್ತಿಯು ಶುಕ್ರವಾರ ಪ್ರಾರಂಭವಾಗಿದೆ. ಈ ವೇಳೆ ನಟಿ ಕರೀನಾ ತಮ್ಮ ಮಗ 'ನಾಟು ನಾಟು' ಹಾಡನ್ನು ಕೇಳಿದಾಗ ಮಾತ್ರ ಊಟ ಮಾಡುತ್ತಾನೆ ಎಂದು ‘ಐಎಎನ್‌ಎಸ್’ ಸುದ್ಧಿ ಸಂಸ್ಥೆಗೆ ತಿಳಿಸಿದ್ದಾರೆ.

ಜಹಾಂಗೀರ್ ಹಿಂದಿ ಡಬ್ ಹಾಡಿಗಿಂತ ತೆಲುಗು ಮೂಲ ಹಾಡನ್ನುಇಷ್ಟಪಡುತ್ತಾನೆ ಎಂದರಲ್ಲದೆ, 'ನಾಟು ನಾಟು' ಹಾಡು 2 ವರ್ಷದ ಮಗುವಿನ ಹೃದಯವನ್ನು ಸ್ಪರ್ಶಿಸುತ್ತಿದೆ ಎಂದಾದರೆ ಹಾಡಿನ ಸಂಯೋಜನೆ ಅದ್ಭುತವಾಗಿದೆ ಎಂದು ಅವರು ಹೇಳಿದ್ದಾರೆ.

95ನೇ ಆಸ್ಕರ್ ಪ್ರಶಸ್ತಿ ಪ್ರದಾನದಲ್ಲಿ ಭಾರತವು ಎರಡು ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದು ಭಾರತೀಯರಿಗೆ ಹೆಮ್ಮೆಪಡುವ ವಿಷಯವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಶ್ಲಾಘನೆ ತಂದುಕೊಂಡುತ್ತಿದೆ ಎಂದು ಕರೀನಾ ತಿಳಿಸಿದ್ದಾರೆ.

'ಇತ್ತಿಚೀನ ದಿನಗಳಲ್ಲಿ ಪ್ರೇಕ್ಷಕರು ಹಿಂದಿ ಚಲನಚಿತ್ರಗಳು, ಪ್ರಾದೇಶಿಕ ಚಿತ್ರಗಳು, ಸಾಕ್ಷ್ಯಚಿತ್ರಗಳನ್ನು ಹೆಚ್ಚು ವೀಕ್ಷಿಸಿಸುತ್ತಿದ್ದಾರೆ. ಇದು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಜನರು ಭಾರತೀಯ ಚಿತ್ರರಂಗವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಪ್ರೇಕ್ಷಕರಿಗೆ ಧನ್ಯವಾದಗಳನ್ನು' ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.