ಕಾರ್ಗಿಲ್: ಕಾರ್ಗಿಲ್ ಯುದ್ಧದ ಹಿರೋ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಜೀವನ ಆಧಾರಿತ 'ಶೇರ್‌ಷಾ' ಚಲನಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಅದೃಷ್ಟ ಎಂದು ನಟ ಸಿದ್ಧಾರ್ಥ ಮಲ್ಹೋತ್ರಾ ಹೇಳಿದ್ದಾರೆ.

ನಿರ್ದೇಶಕ ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ ಕ್ಯಾಪ್ಟನ್ ಬಾತ್ರಾ ಅವರ ಜೀವನ ಕಥೆ ಮತ್ತು ಕಾರ್ಗಿಲ್ ಯುದ್ಧದಲ್ಲಿ ವಿಕ್ರಂ ಅವರು ತಮ್ಮ ಪಡೆಯನ್ನು ಯಾವ ರೀತಿ ಮುನ್ನಡೆಸಿದ್ದರು ಎನ್ನುವ ವಿವರಗಳನ್ನು ಒಳಗೊಂಡ ಕಥೆ ಈ ಚಲನಚಿತ್ರದಲ್ಲಿದೆ. ಮರಣೋತ್ತರವಾಗಿ ವಿಕ್ರಂ ಬಾತ್ರಾ ಅವರಿಗೆ ಪರಮ ವೀರ ಚಕ್ರ ಶೌರ್ಯ ಪ್ರಶಸ್ತಿ ನೀಡಲಾಗಿತ್ತು.

ಸಿದ್ಧಾರ್ಥ ಅವರು ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಕ್ಯಾಪ್ಟನ್ ವಿಕ್ರಂ ಬಾತ್ರಾ ಮತ್ತು ಅವರ ಅವಳಿ ಸಹೋದರ ವಿಶಾಲ್ ಬಾತ್ರಾ ಅವರ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

‘ಐದು ವರ್ಷಗಳ ಹಿಂದೆ ವಿಶಾಲ್ ಬಾತ್ರಾ ಅವರ ಜತೆಗೂಡಿ ಚಲನಚಿತ್ರ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಇದು ನನಗೆ ಮೊದಲ ಚಲನಚಿತ್ರ. ಜೀವನದಲ್ಲಿ ನಿಜವಾದ ಹಿರೋ ಆಗಿದ್ದ ವ್ಯಕ್ತಿಯ ಪಾತ್ರವನ್ನು ನಾನು ಮಾಡುತ್ತಿದ್ದೇನೆ’ ಎಂದು ಸಿದ್ಧಾರ್ಥ ವಿವರಿಸಿದ್ದಾರೆ.

‘ಭಾರತೀಯ ಸೇನೆಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 12ರಂದು ‘ಶೇರ್‌ಷಾ’ ಅಮೆಝಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.