ಮಲಯಾಳಂ ಜನಪ್ರಿಯ ನಟ ಮಮ್ಮುಟಿ ಅಭಿನಯದ ‘ಬ್ರಹ್ಮಯುಗಂ’ ಪೌರಾಣಿಕ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಅನಾವರಣಗೊಂಡಿತು. ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.

ಎಸ್.ಶಶಿಕಾಂತ್ ಮತ್ತು ಚಕ್ರವರ್ತಿ ರಾಮಚಂದ್ರ ಅವರು ‘ನೈಟ್ ಶಿಫ್ಟ್ ಸ್ಟುಡಿಯೊ’ ಮೂಲಕ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಾಹುಲ್ ಸದಾಶಿವನ್ ರಚನೆ ಹಾಗೂ ನಿರ್ದೇಶನವಿದೆ.

‘ಮಮ್ಮುಟಿಯಂತಹ ಶ್ರೇಷ್ಠ ನಾಯಕನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಕನಸು ನನಸಾಗಿದೆ. ಕೇರಳದ ಕರಾಳ ಯುಗದಲ್ಲಿ ಬೇರೂರಿರುವ ಕಥೆಯಾಗಿರುವುದು ವಿಶೇಷ. ಕೊಚ್ಚಿ, ಒಟ್ಟಪಲಂ ಸುಂದರ ತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಿಸಲಾಗುವುದು’ ಎಂದು ನಿರ್ದೇಶಕರು ತಿಳಿಸಿದರು.

ಮಮ್ಮುಟಿ ಅವರೊಂದಿಗೆ ಅರ್ಜುನ್ ಅಶೋಕನ್, ಸಿದ್ದಾರ್ಥ್ ಭರತನ್, ಅಮಲದ್ ಲಿಜ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಸಂಗೀತ ಕ್ರಿಸ್ಟೋ ಕ್ಸೇವಿಯರ್, ಛಾಯಾಗ್ರಹಣ ಶೆಹನಾದ್ ಜಲಾಲ್, ಸಂಕಲನ ಶಫಿಕ್ಯೂ ಮೊಹಮ್ಮದ್ ಅಲಿ ಅವರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.