ಬೆಂಗಳೂರು: ಚಂದನವನ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳ ಬೇಡಿಕೆ ನಟಿಯಾಗಿರುವ ನಿತ್ಯಾ ಮೆನನ್ ತಮ್ಮ ಫ್ಯಾಶನ್ ಉಡುಪುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಕೊರೊನಾ ವೈರಸ್ ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.

ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ2 ಸಿನಿಮಾದಲ್ಲಿ ನಟಿಸಿದ್ದ ನಿತ್ಯಾ ಮೆನನ್ ಕನ್ನಡ ಸಿನಿಮಾ ರಸಿಕರ ಮನಗೆದಿದ್ದರು. ಲಾಕ್ಡೌನ್ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಇನ್ಸ್ಟಾಗ್ರಾಮ್ ಮೂಲಕ ಕೋವಿಡ್–19 ಸಂತ್ರಸ್ತರಿಗೆ ನೆರವು ನೀಡುವ ಬಗ್ಗೆ ಪೋಸ್ಟ್ವೊಂದನ್ನು ಹಾಕಿದ್ದಾರೆ.

ಲಾಕ್ಡೌನ್ ಸಮಯದಲ್ಲಿ ಹಲವು ಸೆಲೆಬ್ರಿಟಿಗಳು ಅಡುಗೆ ಮಾಡುವ, ಆಟ ಆಡುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿ ಇದ್ದರು. ಆದರೆ ನಿತ್ಯಾ ಅಭಿಮಾನಿಗಳಿಂದ ದೂರವೇ ಉಳಿದು ಬಿಟ್ಟರು! ಕೊರೊನಾ ವೈರಸ್ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಮತ್ತೆ ಅಭಿಮಾನಿಗಳ ಸಂಪರ್ಕಕ್ಕೆ ಬಂದಿದ್ದಾರೆ.

ಲ್ಯಾಕ್ಮಿ ಫ್ಯಾಶನ್ ಶೋನಲ್ಲಿ ಧರಿಸಿದ್ದ ಉಡುಪುಗಳನ್ನು ಹರಾಜು ಹಾಕಿ ಅದರಿಂದ ಸಂಗ್ರಹವಾದ ಎಲ್ಲಾ ಹಣವನ್ನು ‘ಅರ್ಪಣಂ‘ಟ್ರಸ್ಟ್ ಮೂಲಕ ಲಾಕ್ಡೌನ್ ಪರಿಣಾಮದಿಂದಾಗಿ ಉದ್ಯೋಗ ಇಲ್ಲದೆ ಕಂಗೆಟ್ಟಿರುವ ಗ್ರಾಮೀಣ ಜನರಿಗೆ ನೀಡಲಾಗುವುದು. ಇದರಿಂದ ಅವರು ಮುಂದೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ನಿತ್ಯಾ ಇನ್ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.ಭಾನುವಾರ 4 ಗಂಟೆಗೆ ಒಂದು ಉಡುಪಿನ ಹರಾಜು ನಡೆಯಲಿದೆ.

ನಿತ್ಯಾ ನಡೆಯಿಂದಾಗಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.