ರಜನೀಕಾಂತ್ ಅಭಿನಯದ ‘ಪೆಟ್ಟಾ’ ಚಿತ್ರ ಕನ್ನಡದಲ್ಲಿ ಡಬ್ ಆಗುತ್ತದೆ ಎಂಬ ಸುದ್ದಿ ರಜನಿ ಅಭಿಮಾನಿಗಳನ್ನು ಕಳೆದ ವಾರ ಖುಷಿಯಲ್ಲಿ ತೇಲಿಸಿತ್ತು. ಅದಾದ ನಂತರ ಬಂದ, ‘ಪೆಟ್ಟಾದ ಕನ್ನಡ ಅವತರಣಿಕೆಯಲ್ಲಿ ರಜನಿ ಪಾತ್ರಕ್ಕೆ ಕನ್ನಡದ ದನಿಯನ್ನು ರಜನಿ ಅವರಿಂದಲೇ ಕೊಡಿಸುವ ಮಾತುಕತೆ ನಡೆಯುತ್ತಿದೆ’ ಎಂಬ ಸುದ್ದಿ ಅಭಿಮಾನಿಗಳ ಖುಷಿಯನ್ನು ಇನ್ನಷ್ಟು ಹೆಚ್ಚಿಸಿತ್ತು.

ಆದರೆ, ‘ಕನ್ನಡದಲ್ಲಿ ನಾನು ಡಬ್ ಮಾಡುವುದಿಲ್ಲ’ ಎಂದು ರಜನೀಕಾಂತ್ ಹೇಳಿರುವುದು, ಪೆಟ್ಟಾ ಸಿನಿಮಾ ಕನ್ನಡದಲ್ಲಿ ಬರಲಿದೆಯೇ ಎಂಬ ಬಗ್ಗೆಯೇ ಪ್ರಶ್ನೆಗಳನ್ನು ಮೂಡಿಸಿದೆ. ‘ಡಬ್ಬಿಂಗ್ ಪ್ರಯತ್ನವನ್ನು ಕೈಬಿಟ್ಟಿಲ್ಲ’ ಎಂದು ಪೆಟ್ಟಾ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಹಕ್ಕು ಖರೀದಿಸಿರುವ ಜಾಕ್ ಮಂಜು ಹೇಳುತ್ತಿದ್ದಾರಾದರೂ, ‘ಕನ್ನಡದಲ್ಲಿ ಬರುವುದು ಯಾವಾಗ’ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹಾಗೆಯೇ ಉಳಿದುಕೊಂಡಿದೆ.

ಪೆಟ್ಟಾ ಚಿತ್ರ ನಿರ್ಮಾಣ ಮಾಡಿರುವುದು ಸನ್ ಪಿಚ್ಚರ್ಸ್ ಸಂಸ್ಥೆ. ‘ಸಂಸ್ಥೆಯ ಜೊತೆ ಜನವರಿ 21ಕ್ಕೆ (ಸೋಮವಾರ) ಸಭೆ ಇದೆ. ಡಬ್ಬಿಂಗ್ ಹೇಗೆ ಮಾಡುವುದು ಎಂಬ ಬಗ್ಗೆ ಅವರ ಜೊತೆ ಚರ್ಚೆ ನಡೆಸಬೇಕು. ಅದಾದ ನಂತರವೇ ಮುಂದಿನ ತೀರ್ಮಾನ’ ಎಂದು ಜಾಕ್ ಮಂಜು ‘ಪ್ರಜಾವಾಣಿ’ಗೆ ತಿಳಿಸಿದರು.

ಇದನ್ನೂ ಓದಿ... ‘ಕ್ಲಾಸ್’ ತಿರುವು, ‘ಮಾಸ್’ ರಂಜನೆಯ ‘ಪೆಟ್ಟಾ’

‘ಪೆಟ್ಟಾ’ ಚಿತ್ರದ ಕನ್ನಡ ಅವತರಣಿಕೆಗೆ ದನಿ ನೀಡಲು ರಜನಿ ಒಪ್ಪಿಕೊಂಡಿದ್ದಿದ್ದರೆ, ಹೆಚ್ಚಿನ ಆದಾಯ ನಿರೀಕ್ಷೆ ಮಾಡಬಹುದಿತ್ತು. ಏಕೆಂದರೆ ಅವರ ಮಾತುಗಳನ್ನು ಅವರದೇ ದನಿಯಲ್ಲಿ ಕನ್ನಡಲ್ಲಿ ಕೇಳಬೇಕು ಎಂದು ಬಯಸುವವರ ಸಂಖ್ಯೆ ದೊಡ್ಡದಾಗಿದೆ. ಆದರೆ, ಈಗ ಬೇರೆಯವರಿಂದ ಡಬ್ ಮಾಡಿಸುವುದಿದ್ದರೆ, ಅದು ಸಿನಿಮಾ ಮಾರುಕಟ್ಟೆಯಲ್ಲಿ ಎಷ್ಟು ಆದಾಯ ತಂದುಕೊಡಬಹುದು ಎಂಬುದರ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎನ್ನುತ್ತವೆ ಚಿತ್ರರಂಗದ ಮೂಲಗಳು.

‘ಹಣಕಾಸಿನ ವಿಚಾರಗಳ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಂಡ ನಂತರವೇ ಮುಂದಿನ ಹೆಜ್ಜೆ’ ಎನ್ನುತ್ತಾರೆ ಮಂಜು.

ಈ ನಡುವೆ, ಡಬ್ಬಿಂಗ್ ಪರ ಕಾರ್ಯಕರ್ತರು ರಜನಿ ತೀರ್ಮಾನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ‘ರಜನೀಕಾಂತ್ ಅವರು ಡಬ್ಬಿಂಗ್ ಮಾಡಲಾರೆ ಎಂದು ಹೇಳಿರುವುದು ದುರದೃಷ್ಟಕರ. ಇದು ಕನ್ನಡಿಗರಿಗೆ ನಿರಾಸೆ ತಂದಿದೆ’ ಎನ್ನುತ್ತಾರೆ ಕನ್ನಡ ಪರ ಕಾರ್ಯಕರ್ತ ಆನಂದ್ ಜಿ.

‘ಡಬ್ಬಿಂಗ್ ಮಾಡಲಾರೆ ಎಂದು ಹೇಳಲು ರಜನಿ ಅವರಿಗೆ ಏನೇ ಕಾರಣ ಇರಬಹುದು. ಆದರೆ, ಅವರು ಆರು ಕೋಟಿ ಕನ್ನಡಿಗರ ಹಕ್ಕುಗಳ (ಡಬ್ ಮಾಡಿರುವ ಸಿನಿಮಾ ವೀಕ್ಷಣೆಯ ಹಕ್ಕು) ಬಗ್ಗೆ ನಿರ್ಲಕ್ಷ್ಯ ಹೊಂದಿದ್ದಾರೆ. ಇದು ಖಂಡನಾರ್ಹ’ ಎಂದು ಆನಂದ್ ಹೇಳುತ್ತಾರೆ.

ಇಡೀ ವಿದ್ಯಮಾನವನ್ನು ಇನ್ನೊಂದು ಬಗೆಯಲ್ಲಿ ನೋಡುತ್ತಾರೆ ಡಬ್ಬಿಂಗ್ ಪರ ಕಾರ್ಯಕರ್ತ ಗಣೇಶ್ ಚೇತನ್. ‘ಪೆಟ್ಟಾ ಚಿತ್ರದ ಕನ್ನಡ ಅವತರಣಿಕೆಗೆ ರಜನಿ ಅವರೇ ದನಿ ನೀಡುತ್ತಾರೆ ಎಂಬ ಸುದ್ದಿ ಬಂದಾಗಲೇ, ಆ ರೀತಿ ಆಗುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಾಗಿಬಿಟ್ಟಿತು. ಕನ್ನಡಿಗರು ಇಂದು ಡಬ್ಬಿಂಗ್ ಬೇಕು ಎಂದು ಕೇಳುತ್ತಿದ್ದಾರೆ. ಅವರ ಒತ್ತಾಯಕ್ಕೆ ಪ್ರತಿಯಾಗಿ, ಅಂದರೆ ಡಬ್ಬಿಂಗ್‌ಗೆ ವಿರುದ್ಧವಾಗಿ ಒಂದು ನರೇಟಿವ್ ನಿರ್ಮಾಣ ಮಾಡಲೆಂದೇ ಇಂತಹ ಸುದ್ದಿ ಹರಡಲಾಯಿತು’ ಎನ್ನುತ್ತಾರೆ ಗಣೇಶ್.

‘ರಜನಿ ಅವರನ್ನು ಡಬ್ಬಿಂಗ್‌ಗೆ ಬಳಕೆ ಮಾಡಿಕೊಂಡಾಗ ಆಗುವ ವೆಚ್ಚವನ್ನು ನಿಭಾಯಿಸಲು ಕನ್ನಡದ ಮಾರುಕಟ್ಟೆಗೆ ಸಾಧ್ಯವೇ?’ ಎಂದು ಗಣೇಶ್ ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ ಪ್ರತಿನಿಧಿ ಬಳಿ ಪ್ರಶ್ನಿಸಿದರು.

‘ತಾವು ಪೆಟ್ಟಾ ಡಬ್ ಮಾಡುವುದಿಲ್ಲ ಎಂದು ರಜನಿ ಅವರು ಆಡಿದ ಮಾತಿನಲ್ಲೇ ಆ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಬೇಡಿ ಎಂಬ ಅರ್ಥವೂ ಇದೆ. ಚಲನಚಿತ್ರ ಉದ್ಯಮದ ಕೆಲವು ಹತೋಟಿ ಕೂಟಗಳು ರಜನಿ ಅವರ ತೀರ್ಮಾನದ ಹಿಂದಿವೆ. ನಾವು ಡಬ್ಬಿಂಗ್ ಪರ ಅಭಿಯಾನವನ್ನು ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ಯುತ್ತೇವೆ’ ಎಂದು ಗಣೇಶ್ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ಡಬ್ಬಿಂಗ್ ವಿರೋಧಿ ಹತೋಟಿ ಕೂಟ ಬಹಿರಂಗವಾಗಿ ಏನನ್ನೂ ಮಾತನಾಡದೆ ಇದ್ದರೂ, ಒಳಗೊಳಗೇ ತನ್ನ ಕುತಂತ್ರ ಮುಂದುವರಿಸುತ್ತ ಇದೆ ಎಂಬುದು ಈ ವಿದ್ಯಮಾನದಿಂದ ಸಾಬೀತಾಗಿದೆ. ಆದರೆ, ಈಗಲೂ ಕಾಲ ಮಿಂಚಿಲ್ಲ. ರಜನಿ ಅವರ ದನಿಯನ್ನು ಅನುಕರಿಸಬಲ್ಲ ಕಲಾವಿದರನ್ನು ಬಳಸಿ ಡಬ್ ಮಾಡಿಸಬಹುದು’ ಎಂದು ಆನಂದ್ ಸಲಹೆ ನೀಡಿದರು.

ಇಷ್ಟೆಲ್ಲ ಬೆಳವಣಿಗೆಯ ನಡುವೆಯೂ ಜಾಕ್ ಮಂಜು ಮಾತ್ರ ತಮ್ಮ ತಾತ್ವಿಕ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ ಎನ್ನುತ್ತಾರೆ. ‘ಡಬ್ಬಿಂಗ್ ಪರ ನಿಲುವು ನನ್ನದು. ಕನ್ನಡಿಗರಿಗೆ ಎಲ್ಲ ವಿಷಯಗಳು ಕನ್ನಡಲ್ಲೇ ಸಿಗಬೇಕು ಎಂಬುದು ನಿಲುವು ನನ್ನದು’ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.