ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅದ್ಭುತ ವಾಗ್ಮಿ, ಜನರನ್ನು ತಮ್ಮತ್ತ ಸೆಳೆಯುವಂತಹ ಗುಣ ಹೊಂದಿದ್ದಾರೆ ಎಂದು ಬಾಲಿವುಡ್ ನಟ ರಣಬೀರ್ ಕಪೂರ್ ಹೇಳಿದ್ದಾರೆ.

‘ಪೀಪಲ್ ಬೈ ಡಬ್ಲ್ಯುಟಿಎಫ್‘ ಪಾಡ್ಕಾಸ್ಟ್ ಕಾರ್ಯಕ್ರಮದಲ್ಲಿ ಝೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಮಾತನಾಡಿದ್ದಾರೆ.
.ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ಸೇರಿ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ CBI.ಕ್ಯಾಲಿಫೋರ್ನಿಯಾ: 3.6 ಲಕ್ಷ ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಕಾಳ್ಗಿಚ್ಚು.
‘ಅನಿಮಲ್‘ ಚಿತ್ರದ ಮೂಲಕ ಹೆಚ್ಚು ಪ್ರಖ್ಯಾತಿ ಗಳಿಸಿರುವ ರಣಬೀರ್ ಅವರನ್ನು ನೀವು ರಾಜಕೀಯಕ್ಕೆ ಪ್ರವೇಶಿಸುತ್ತೀರಾ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿಲ್ಲ, ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ. ಕಲಾ ಜಗತ್ತಿನಲ್ಲಿಯೇ ಇರಲು ಇಷ್ಟ ಪಡುತ್ತೇನೆ ಎಂದೂ ತಿಳಿಸಿದ್ದಾರೆ.

2019ರಲ್ಲಿ ಪ್ರಧಾನಿ ಮೋದಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು (ಮೋದಿ) ಉತ್ತಮ ವಾಕ್ಚಾತುರ್ಯವನ್ನು ಹೊಂದಿದ್ದಾರೆ. ಜನರನ್ನು ತಮ್ಮತ್ತ ಸೆಳೆಯುವ ಗುಣ ಹೊಂದಿದ್ದಾರೆ ಎಂದು ರಣಬೀರ್ ಹೇಳಿದ್ದಾರೆ.
.13 ಅಕ್ರಮ ಕೋಚಿಂಗ್ ಸೆಂಟರ್ಗಳಿಗೆ ಬೀಗ ಜಡಿದ ದೆಹಲಿ ಮಹಾನಗರ ಪಾಲಿಕೆ.ಮಧ್ಯಪ್ರದೇಶ: ಪಾಶ್ಚಿಮಾತ್ಯ ಉಡುಪು ತೊಟ್ಟ ಭಕ್ತರಿಗೆ ಕಾಳಿಕಾ ದೇವಿ ದರ್ಶನ ನಿಷೇಧ.
ಅಲಿಯಾ ಭಟ್, ರಣವೀರ್ ಸಿಂಗ್, ಭೂಮಿ ಪೆಡ್ನೇಕರ್, ಆಯುಷ್ಮಾನ್ ಖುರಾನಾ, ಸಿದ್ಧಾರ್ಥ್ ಮಲ್ಹೋತ್ರಾ, ಏಕ್ತಾ ಕಪೂರ್ , ರಾಜ್ಕುಮಾರ್ ರಾವ್, ವರುಣ್ ಧವನ್, ಅಶ್ವಿನಿ ಅಯ್ಯರ್ ತಿವಾರಿ ಮತ್ತು ರೋಹಿತ್ ಶೆಟ್ಟಿ, ವಿಕ್ಕಿ ಕೌಶಲ್ ಸೇರಿದಂತೆ ಕರಣ್ ಜೋಹರ್ ನಾವೆಲ್ಲರೂ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದೆವು. ಆ ವೇಳೆ ಪ್ರಧಾನಿ ಅವರು ಸೌಜನ್ಯವಾಗಿ ನಮ್ಮೊಂದಿಗೆ ಮಾತುಕತೆ ನಡೆಸಿದರು. ಅವರು ಎಷ್ಟು ಅದ್ಭುತವಾಗಿ ಮಾತನಾಡುತ್ತಾರೆ ಎಂದು ನಾವೆಲ್ಲರೂ ಅವರ ಭಾಷಣಗಳಲ್ಲಿ ನೋಡಿದ್ದೇವೆ ಎಂದು ರಣಬೀರ್ ತಿಳಿಸಿದ್ದಾರೆ.

ಆ ಭೇಟಿಯು ಸೌಜನ್ಯಯುತವಾಗಿತ್ತು ಹಾಗೂ ನಾವೆಲ್ಲರೂ ಪ್ರಧಾನಿ ಅವರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡೆವು. ಆ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು ಎಂದೂ ಮಾಹಿತಿ ಹಂಚಿಕೊಂಡಿದ್ದಾರೆ.
.ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ: ಆಷಾಢದಲ್ಲಿ ಇದೇ ಮೊದಲು!.ಕೋಚಿಂಗ್ ಸೆಂಟರ್ ಮಾಲೀಕ, ನಿರ್ವಾಹಕರಿಗೆ 14 ದಿನ ನ್ಯಾಯಾಂಗ ಬಂಧನ .
ನೀವು ನಿರ್ಮಾಪಕರಾಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಒಂದು ಸಿನಿಮಾವನ್ನು ನಿರ್ಮಿಸಿ ಕೈ ಸುಟ್ಟುಕೊಂಡಿದ್ದೇನೆ. ಸಿನಿಮಾ ನಿರ್ಮಾಣದ ಕಲೆ ನನಗೆ ಒದಗಿ ಬಂದಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.