ಮುಂಬೈ: ‘ಖಾಸಗಿತನವನ್ನು ಗೌರವಿಸಿ’ ಎಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಮಕ್ಕಳು ಮನವಿ ಮಾಡಿದ್ದಾರೆ.

ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು 29 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ದೂರವಾಗುವುದಾಗಿ ಘೋಷಿಸಿದ್ದಾರೆ. ಈ ದಂಪತಿ 1995ರಲ್ಲಿ ವಿವಾಹವಾಗಿದ್ದರು.

ಈ ದಂಪತಿ ದೂರವಾಗುವ ಬಗ್ಗೆ ಘೋಷಿಸಿದ ಬೆನ್ನಲ್ಲೇ ಅವರ ಮಕ್ಕಳಾದ ಖತಿಜಾ, ರಹೀಮಾ ಮತ್ತು ಅಮೀನ್ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿಕೊಳ್ಳುವ ಮೂಲಕ ’ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ, ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ರಹೀಮಾ ತಮ್ಮ ಸ್ಟೋರಿಯಲ್ಲಿ ರೆಹಮಾನ್ ಅವರನ್ನು ಉಲ್ಲೇಖಿಸಿ ‘ನಿಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ಸೇರಿಸಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.
.ಮದುವೆಯಾದ 29 ವರ್ಷಗಳ ನಂತರ ಬೇರೆಯಾಗಿದ್ದೇವೆ: A.R.ರೆಹಮಾನ್, ಸಾಯಿರಾ ಬಾನು ಘೋಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.