ಬೆಂಗಳೂರು: ಅನಾರೋಗ್ಯದಿಂದಾಗಿ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ಸ್ಟಾರ್ ರಜನಿಕಾಂತ್ ಗುರುವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಚೆನ್ನೈ ಪೊಲೀಸರನ್ನು ಉಲ್ಲೇಖಿಸಿ ‘ಎಎನ್ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
.ರಜನಿಕಾಂತ್ ಅಭಿನಯದ ’ಕೂಲಿ‘ ಸಿನಿಮಾದ ದೃಶ್ಯ ಸೋರಿಕೆ: ನಿರ್ದೇಶಕ ಬೇಸರ.
‘ರಜನಿಕಾಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯದ ಪ್ರಗತಿಯ ಬಗ್ಗೆ ವೈದ್ಯರು ಸಂತುಷ್ಠರಾಗಿದ್ದಾರೆ’ ಎಂದು ಮೂಲಗಳು ಗುರುವಾರ ತಿಳಿಸಿದ್ದವು.

73 ವರ್ಷದ ರಜನಿಕಾಂತ್ ಶೀಘ್ರವೇ ವೃತ್ತಿಗೆ ಮರಳಲಿದ್ದು, ಅದಕ್ಕಿಂತ ಮುನ್ನ ಅವರು ಹೃಸ್ವ ವಿಶ್ರಾಂತಿಯಲ್ಲಿರಲಿದ್ದಾರೆ.
.ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಗ್ಗೆ ನನಗೆ ಗೊತ್ತಿಲ್ಲ: ನಟ ರಜನಿಕಾಂತ್.
ತೀವ್ರ ಹೊಟ್ಟೆನೋವಿನಿಂದಾಗಿ ಸೆಪ್ಟೆಂಬರ್ 30 ರ ಸಂಜೆ ರಜನಿಕಾಂತ್ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯದ ಮುಖ್ಯ ರಕ್ತನಾಳದಲ್ಲಿ ಊತ ಕಂಡು ಬಂದಿದ್ದರಿಂದ ಟ್ರಾನ್ಸ್ಕ್ಯಾಥೆಟರ್ ಚಿಕಿತ್ಸಾ ವಿಧಾನದಿಂದ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಟಿಪ್ಪಣಿಯಲ್ಲಿ ಹೇಳಲಾಗಿದೆ.
.ಮದ್ಯವ್ಯಸನಿಯಾಗಿದ್ದು ನನ್ನ ಜೀವನದ ದೊಡ್ಡ ತಪ್ಪು: ನಟ ರಜನಿಕಾಂತ್ ಬೇಸರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.