ತಮಗೆ ಮಾದಕ ವಸ್ತು ಸಿಕ್ಕಿದ್ದು ನಿಜ. ಅದನ್ನು ಸಾರಾ ಆಲಿ ಖಾನ್ ಅವರು ಕೊಟ್ಟಿದ್ದರು. ಗಾಂಜಾ ಮತ್ತು ವೋಡ್ಕಾವನ್ನು ಅವರು ನನಗೆ ಕೊಟ್ಟಿದ್ದರು ಎಂದು ನಟಿ ರಿಯಾ ಚಕ್ರವರ್ತಿ ಅವರು ಮಾದಕ ವಸ್ತು ನಿಯಂತ್ರಣ ಬ್ಯೂರೋದ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಸಾರಾ ಅಲಿ ಖಾನ್ (ನಟ ಸೈಫ್ ಆಲಿ ಖಾನ್ – ಅಮೃತಾ ಸಿಂಗ್ ದಂಪತಿ ಪುತ್ರಿ) ಅವರು ಗಾಂಜಾವನ್ನು ಸುರುಳಿ ಸುತ್ತಿದ ಡೂಡಿಯೊಳಗಿಟ್ಟು (ಸಿಗರೇಟ್ನಂಥ ರಚನೆ) ಕೊಟ್ಟಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ನಟ ದಿವಂಗತ ಸುಶಾಂತ್ ಸಿಂಗ್ ಅವರ ಸಾವಿನ ಹಿನ್ನೆಲೆಯಲ್ಲಿ ಡ್ರಗ್ಸ್ ಜಾಲದ ಕುರಿತ ವಿಚಾರಣೆ ನಡೆಯುತ್ತಿದೆ. ಸಾರಾ ಮತ್ತು ರಿಯಾ ಅವರು ನಡೆಸಿದ ಸಂದೇಶ (ಚಾಟ್)ಗಳೂ ಬಹಿರಂಗಗೊಂಡಿವೆ. ಕಳೆದ ವರ್ಷ ಸಾರಾ ಅವರನ್ನೂ ಎನ್ಸಿಬಿ ಕರೆಸಿ ವಿಚಾರಣೆ ನಡೆಸಿತ್ತು. ಸಾರಾ ಮತ್ತು ಸುಶಾಂತ್ ಥೈಲ್ಯಾಂಡ್ ಪ್ರವಾಸ ಹೋಗಿದ್ದು, ಡೇಟಿಂಗ್ ನಡೆಸಿದ್ದ ಬಗ್ಗೆಯೂ ಅವರು ವಿವರಿಸಿದ್ದರು. ಈಗ ರಿಯಾ ಅವರ ಹೇಳಿಕೆಯೂ ದಾಖಲಾಗಿದೆ. ಈ ಹೇಳಿಕೆಗಳ ಆಧಾರದ ಮೇಲೆ ಎನ್ಸಿಬಿ ಆರೋಪಪಟ್ಟಿ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.