ನವದೆಹಲಿ: ಖ್ಯಾತ ನಿರ್ದೇಶಕ ಎಸ್. ಶಂಕರ್ ನಿರ್ದೇಶಿಸಿರುವ, ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಚಿತ್ರದ ಪ್ರದರ್ಶನ ಅವಧಿ ಕಡಿತಗೊಳಿಸಲಾಗಿದೆ.

ಈ ಕುರಿತು ನಿರ್ಮಾಪಕರು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರ ಬರೋಬ್ಬರಿ 180 ನಿಮಿಷ (ಮೂರು ಗಂಟೆ) ಇತ್ತು. ಅದನ್ನು ಈಗ 12 ನಿಮಿಷ ಕಡಿತಗೊಳಿಸಿ ಒಟ್ಟು 168 ನಿಮಿಷಕ್ಕೆ ಮಿತಿಗೊಳಿಸಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ತನ್ನ ಅಧಿಕೃತ ಖಾತೆ 'ಎಕ್ಸ್'ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಚಿತ್ರ ಇದೇ ಜುಲೈ 12ರಂದು ಬಿಡುಗಡೆಯಾಗಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹುತೇಕರು ಸಿನಿಮಾದ ಅವಧಿ ಹೆಚ್ಚಾಯಿತು ಎಂದು ಕ್ಯಾತೆ ತೆಗೆದಿದ್ದರು. ಇದಕ್ಕೆ ನಿರ್ಮಾಪಕರು ಸ್ಪಂದಿಸಿದ್ದಾರೆ. ಅನಗತ್ಯ ದೃಶ್ಯಗಳಿಗೆ ಕಡಿವಾಣ ಹಾಕಲಾಗಿದೆ.

'ಇಂಡಿಯನ್' ಚಿತ್ರ 1996ರಲ್ಲಿ ತೆರೆಕಂಡಿದ್ದ ‘ಇಂಡಿಯನ್’ನ ಮುಂದುವರಿದ ಭಾಗ. ಕಮಲ್ ಹಾಸನ್ ಅವರು ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದು ಇಲ್ಲಿ ವಿಭಿನ್ನ ಅವತಾರದಲ್ಲಿ ಮುಂದುವರೆದಿದೆ. ನಟ ಸಿದ್ದಾರ್ಥ್ ಸಹ ಮುಖ್ಯಪಾತ್ರದಲ್ಲಿದ್ದು ಚಿತ್ರವು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕಥೆಯನ್ನು ಹೊಂದಿದೆ.

ಕೆಲವರು ಹಳೆಯ ಸರಕು ಇಟ್ಟುಕೊಂಡು ಮೋಡಿ ಮಾಡುವಲ್ಲಿ ಶಂಕರ್ ವಿಫಲರಾಗಿದ್ದಾರೆ ಎಂದು ಆಕ್ಷೇಪಿಸಿದ್ದರೇ ಇನ್ನೂ ಕೆಲವರು ಕಮಲ್ ಹಾಸನ್ ಅಭಿಮಾನಿಗಳಿಗೆ ಇದು ಭರ್ಜರಿ ಉಡುಗೊರೆ ಎಂದು ಹೇಳಿದ್ದರು.

ಚಿತ್ರದಲ್ಲಿ ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಎಸ್.ಜೆ ಸೂರ್ಯ, ವಿವೇಕ್, ಬಾಬಿ ಸಿಂಹ, ನೆಡುಮುಡಿ ವೇಣು, ಪಿ ಸಮುದ್ರಕನಿ, ಪ್ರಿಯಾ ಭವಾನಿ ಶಂಕರ್, ಮನೋಬಾಲಾ, ಗುಲ್ಶನ್ ಗ್ರೋವರ್, ಪಿಯೂಷ್ ಮಿಶ್ರಾ ಮತ್ತು ಬ್ರಹ್ಮಾನಂದಂ ಬಣ್ಣ ಹಚ್ಚಿದ್ದಾರೆ.

ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಛಾಯಾಗ್ರಹಣವಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.