ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಜೀಬ್ರಾ’ವನ್ನೇರಿ ಬಂದ ಧನಂಜಯ!

Published : 4 ಅಕ್ಟೋಬರ್ 2024, 0:25 IST
Last Updated : 4 ಅಕ್ಟೋಬರ್ 2024, 0:25 IST
ಫಾಲೋ ಮಾಡಿ
Comments

ನಟ ಧನಂಜಯ ಹಾಗೂ ತೆಲುಗಿನ ಸತ್ಯದೇವ್ ಮುಖ್ಯಭೂಮಿಕೆಯಲ್ಲಿರುವ ‘ಜೀಬ್ರಾ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶಿವರಾಜ್‌ಕುಮಾರ್ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ. 

ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣಗೊಂಡಿದೆ. ಇದು ಧನಂಜಯ ಅಭಿನಯದ 26ನೇ ಸಿನಿಮಾ. ‘ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಚಿತ್ರ. ಡಾಲಿ ವೈಟ್ ಹಾರ್ಸ್, ಸತ್ಯದೇವ್ ಬ್ಲಾಕ್ ಹಾರ್ಸ್ ಎಂಬ ಕಲ್ಪನೆಯ ಕಥೆ. ತಮಿಳು, ಮಲಯಾಳಂ ಭಾಷೆಗಳಿಗೂ ಚಿತ್ರ ಡಬ್‌ ಆಗಿದೆ’ ಎಂದಿದೆ ಚಿತ್ರತಂಡ. 

ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿವೆ. ಪ್ರಿಯಾ ಭವಾನಿಶಂಕರ್‌, ಸುನಿಲ್‌ ವರ್ಮಾ, ಸತ್ಯರಾಜ್‌ ಮುಂತಾದವರು ತಾರಾಗಣದಲ್ಲಿದ್ದಾರೆ. ರವಿ ಬಸ್ರೂರ್  ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಚಿತ್ರಗ್ರಹಣ, ಅನಿಲ್ ಕ್ರಿಶ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT