ರಿಯಲ್ ಸ್ಟಾರ್ ಉಪೇಂದ್ರ ಮತ್ತೊಮ್ಮೆ ಸೆಂಚುರಿ ಸ್ಟಾರ್‌ಗೆ ಆ್ಯಕ್ಷನ್ ಕಟ್ ಹೇಳುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಇತ್ತೀಚೆಗೆ ನಡೆದ ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ‘ಓಂ’ ಕಾಂಬಿನೇಷನ್‌ನ ಎರಡನೇ ಪ್ರಾಜೆಕ್ಟ್ ಬಗ್ಗೆ ಸುಳಿವು ಸಿಕ್ಕಿದೆ.

‘ಓಂ ಎನ್ನುವ ಒಂದು ಸಿನಿಮಾ ಬರದೇ ಹೋಗಿದ್ದರೆ ಭಾರತದ ಸಿನಿಮಾ ಇತಿಹಾಸದಲ್ಲಿ ಅಂಡರ್‌ವರ್ಲ್ಡ್ ಸಿನಿಮಾಗಳೇ ಬರುತ್ತಿರಲಿಲ್ಲ. ಅಂಡರ್‌ವರ್ಲ್ಡ್ ರುಚಿ ತೋರಿಸಿದ ನಿರ್ದೇಶಕ ಉಪೇಂದ್ರ. ನಮ್ಮ ಹೋಂ ಪ್ರೊಡಕ್ಷನ್‌ನಲ್ಲಿ ಆ ಸಿನಿಮಾ ಮೂಡಿಬಂದಿತ್ತು. ಇದು ನಮಗೆ ಹೆಮ್ಮೆ. ಇವತ್ತಿಗೂ ಆ ಸಿನಿಮಾವನ್ನು ಮರೆಯಲು ನನಗೆ ಸಾಧ್ಯವಿಲ್ಲ. ದಾಖಲೆಗಳು ಒಮ್ಮೆಯಷ್ಟೇ ಬರೆಯಲು ಸಾಧ್ಯ. ಅದನ್ನು ಉಪೇಂದ್ರ ಬರೆದಿದ್ದಾರೆ. ಅವರ ನಿರ್ದೇಶನಕ್ಕೆ ನಾನೊಬ್ಬ ದೊಡ್ಡ ಅಭಿಮಾನಿ’ ಎಂದರು ನಟ ಶಿವರಾಜ್‌ಕುಮಾರ್.

ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಉಪೇಂದ್ರ, ‘ಆದಷ್ಟು ಬೇಗ ಶಿವಣ್ಣನ ಜೊತೆ ಸಿನಿಮಾ ಮಾಡುತ್ತೇನೆ. ಅಪ್ಪುಗೆ ಆ್ಯಕ್ಷನ್ ಕಟ್ ಹೇಳುವ ಆಸೆ ಇತ್ತು. ಆದರೆ ಅದು ಈಡೇರಲಿಲ್ಲ. ಶಿವಣ್ಣನಲ್ಲಿ ಅಪ್ಪು ಅವರನ್ನು ಕಾಣುತ್ತೇನೆ. ಪ್ರೊಡಕ್ಷನ್‌ಗೆ ಗೀತಕ್ಕ ಇದ್ದಾರೆ’ ಎಂದರು.

ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಟ್ರೆಂಡಿಂಗ್‌ನಲ್ಲಿರುವ ‘ಕಬ್ಜ’ ಸಿನಿಮಾ, ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದೇ(ಮಾರ್ಚ್ 17) ಬಿಡುಗಡೆಯಾಗುತ್ತಿದೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ‘ಈ ಪ್ಯಾನ್ ಇಂಡಿಯಾ ಸಿನಿಮಾ ಹಿಂದಿ ಬೆಲ್ಟ್‌ನಲ್ಲೇ ಸುಮಾರು 1,800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದರು ಆರ್. ಚಂದ್ರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.