ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಟಿ ಆಲಿಯಾ ಭಟ್ ಅವರು ಗಂಗೂಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್ ದೇವಗನ್ ಗಮನ ಸೆಳೆದಿದ್ದಾರೆ.

ಗಂಗೂಬಾಯಿ ವೇಶ್ಯೆಯರಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕಿಗಾಗಿ ಹಾಗೂ ಅವರ ಮಕ್ಕಳಿಗೆ ಶಿಕ್ಷಣದ ಹಕ್ಕಿಗಾಗಿ ಹೋರಾಡುವ ಕಥಾಹಂದರ ಟ್ರೈಲರ್ನಲ್ಲಿದೆ.

'ಒಂದು ಬಾರಿ ಗೌರವವನ್ನು ಕಳೆದುಕೊಂಡರೆ ಮತ್ತೆಂದೂ ವಾಪಸ್ ಸಿಗುವುದಿಲ್ಲ. ಆದರೆ ನಾವು ಪ್ರತಿ ರಾತ್ರಿ ಗೌರವವನ್ನು ಮಾರಿಕೊಂಡು ಬದುಕುತ್ತಿದ್ದೇವೆ. ಹಾಗಿದ್ದರೂ ನಮಗಿರುವ ಗೌರವ ಕಡಿಮೆಯಾಗುವುದಿಲ್ಲ' ಎಂಬ ಡೈಲಾಗ್ ಗಮನ ಸೆಳೆಯುತ್ತಿದೆ.

'ಅಧಿಕಾರ, ಸಂಪತ್ತು ಮತ್ತು ಸದ್ಬುದ್ಧಿ ಗಳು ಮಹಿಳೆಗಿದ್ದರೆ ಪುರುಷ ತನ್ನನ್ನು ತಾನು ಹೇಗೆ ಪ್ರಧಾನ ಎಂದೆನಿಸಿಕೊಳ್ಳುತ್ತಾನೆ?' ಎಂಬ ಗಂಗೂಬಾಯಿ ಪ್ರಶ್ನೆ ಪುರುಷ ಪ್ರಧಾನ ಸಮಾಜದ ವಿರುದ್ಧದ ಧ್ವನಿಯಾಗಿದೆ.

ಪಾತ್ರ ಪೋಷಣೆಗೆ ಕಾಮಾಟಿಪುರದ ವೇಶ್ಯೆಯರನ್ನು ಭೇಟಿಯಾಗಿದ್ದ ಆಲಿಯಾ ಭಟ್

ಫೆಬ್ರುವರಿ 25ಕ್ಕೆ ಚಿತ್ರ ತೆರೆ ಕಾಣಲಿದೆ. ಚಿತ್ರದಲ್ಲಿ ಸೀಮಾ ಫಹ್ವಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್ ದೇವಗನ್ ಮತ್ತು ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.