‘ಮಾನವ ಕಂಪ್ಯೂಟರ್’ ಖ್ಯಾತಿಯ ಕನ್ನಡತಿ ಮತ್ತುಗಣಿತಜ್ಞೆ ಶಂಕುತಲಾ ದೇವಿ ಅವರ ಜೀವನಾಧಾರಿತ ‘ಶಕುಂತಲಾ ದೇವಿ’ ಸಿನಿಮಾದ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ.

2 ನಿಮಿಷ 27 ಸೆಕೆಂಡು ಅವಧಿಯ ಈ ಟ್ರೇಲರ್ ಬಿಡುಗಡೆಯಾದ ಒಂದೇ ದಿನದಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಕ್ರಮ್ ಮಲ್ಹೋತ್ರ ಮತ್ತು ಸೋನಿ ಪಿಕ್ಚರ್ಸ್ ನಿರ್ಮಿಸಿರುವ, ಅನು ಮೆನನ್ ನಿರ್ದೇಶನದ ‘ಶಕುಂತಲಾ ದೇವಿ’ ಚಿತ್ರ ಇದೇ ತಿಂಗಳ 31ರಂದು ಅಮೆಜಾನ್ ಪ್ರೈಮ್‌ನಲ್ಲಿ ತೆರೆ ಕಾಣಲಿದೆ.

ಬಾಲಿವುಡ್ ನಟಿ ವಿದ್ಯಾ ಬಾಲನ್ ‘ಶಕುಂತಲಾ ದೇವಿ’ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಶಕುಂತಲಾ ಅವರ 20ನೇ ವಯಸ್ಸಿನಿಂದ ವೃತ್ತಿಜೀವನದ ಕೊನೆಯವರೆಗಿನ ಪಾತ್ರದಲ್ಲಿ ವಿದ್ಯಾ ಕಾಣಿಸಿಕೊಳ್ಳಲಿದ್ದಾರೆ.

1929ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶಕುಂತಲಾ ಅವರು ಸಾಂಪ್ರದಾಯಿಕ ಶಿಕ್ಷಣ ಪಡೆಯಲಿಲ್ಲ. ಆದರೆ, ಬಾಲ್ಯದಿಂದಲೇ ಗಣಿತದಲ್ಲಿ ತುಂಬಾ ಪರಿಣತೆಯಾಗಿದ್ದರು. ಸಂಖ್ಯಾಶಾಸ್ತ್ರಜ್ಞೆಯಾಗಿದ್ದ ಅವರು ಗಣಿತದ ಪಜಲ್ಸ್, ಜ್ಯೋತಿಷ್ಯ ಶಾಸ್ತ್ರ ಮತ್ತು ಅಡುಗೆ ಬಗ್ಗೆಯೂ ಪುಸ್ತಕಗಳನ್ನು ಬರೆದಿದ್ದಾರೆ.

ತುಂಬಾ ಅದ್ಧೂರಿಯಾಗಿ ಮೂಡಿಬಂದಿರುವ ಈ ಟ್ರೇಲರ್‌ನಲ್ಲಿಶಕುಂತಲಾ ಅವರು ಗಣಿತದಲ್ಲಿ ಕೈಗೊಂಡು ಹಲವು ಅಚ್ಚರಿಯ ಚಟುವಟಿಕೆಗಳ ತುಣುಕುಗಳಿವೆ. ಈ ಸಿನಿಮಾ ಜೂನ್ 8ರಂದು ರಿಲೀಸ್ ಆಗಬೇಕಿತ್ತು.ಕೊರೊನಾ ಭೀತಿಯ ಪರಿಣಾಮ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿತ್ತು. ಈಗ ಅಮೆಜಾನ್ ಪ್ರೈಮ್‌ನಲ್ಲಿ 31ರಂದು ಬಿಡುಗಡೆಯಾಗುತ್ತಿದೆ.

ಗಣಿತದ ಪಜಲ್ ಇರುವಕಾಗದವೊಂದನ್ನು ಹಿಡಿದು ನಿಂತ ತಮ್ಮ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿದ್ಯಾ ಬಾಲನ್, ಈ ಸಮಸ್ಯೆ ಬಿಡಿಸಿದರೆ ನಿಮಗೆ ಆಶ್ಚರ್ಯ ಕಾದಿದೆ! ಎಂದು ಹೇಳಿದ್ದಾರೆ.

ಕನ್ನಡಿಗ ಪ್ರಕಾಶ್ ಬೆಳವಾಡಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಸಾನ್ಯಾ ಮಲ್ಹೋತ್ರಾ, ಅಮಿತ್ ಸಧಾ, ಜಿಶು ಸೇನ್‌ಗುಪ್ತಾ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.