ಹಾರರ್ ಸಸ್ಪೆನ್ಸ್ ಕಥೆ ಆಧರಿತ ಚಿತ್ರ ‘ಶಾರ್ದೂಲ’ ವರಮಹಾಲಕ್ಷ್ಮೀ ಹಬ್ಬದಂದು (ಆ. 20) ಬಿಡುಗಡೆ ಆಗಲಿದೆ.ದೆವ್ವ ಇರಬಹುದಾ...? ಅನ್ನುವುದು ಚಿತ್ರದ ಟ್ಯಾಗ್ಲೈನ್.

ಕೋವಿಡ್ ಸಂಕಷ್ಟದ ಕಾಲದಲ್ಲಿ ಜನರಿಗೆ ಮನೋರಂಜನೆ ನೀಡಲು ಈ ಚಿತ್ರ ಬರುತ್ತಿದೆ. ಪ್ರೇಕ್ಷಕರ ಸ್ಪಂದನ ಮುಖ್ಯ ಎಂದರು ಚಿತ್ರದ ನಾಯಕ ಚೇತನ್ಚಂದ್ರ.

ಚಿತ್ರಕ್ಕೆ ಕೃತಿಕಾ ರವೀಂದ್ರ ನಾಯಕಿ. ತುಂಬಾ ಭಯಗ್ರಸ್ತ ಹುಡುಗಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ರಾಬರ್ಟ್ ಖ್ಯಾತಿಯ ಐಶ್ವರ್ಯಾ ಪ್ರಸಾದ್ ಬೋಲ್ಡ್ ಪಾತ್ರದಲ್ಲಿ ಇದ್ದಾರೆ.

ಭೈರವ ಸಿನಿಮಾಸ್ ಮತ್ತು ಸಿ.ವಿ. ಆರ್. ಸಿನಿಮಾಸ್ ಲಾಂಛನದಲ್ಲಿ ರೋಹಿತ್ ಶಾಂತಪ್ಪ ಹಾಗೂ ಕಲ್ಯಾಣ್ ಸಿ. ನಿರ್ಮಿಸಿರುವ ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ.ವೈ.ಜಿ.ಆರ್ ಮನು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನ ಹಾಗು ಮಾಸ್ ಮಾದ, ವೈಲೆಂಟ್ ವೇಲು ಮತ್ತು ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ರವಿತೇಜ, ನವೀನ್ ಕುಮಾರ್,ಕಲ್ಯಾಣ್, ಹೃಷಿಕೇಶ್, ಮಹೇಶ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.