ಬೆಂಗಳೂರು: ಸೆಕ್ಸ್ ಎಜ್ಯುಕೇಷನ್ ಬಗ್ಗೆ ಚಿತ್ರಿಸಿರುವ ಹಿಂದಿಯ ‘ಛತ್ರಿವಾಲಿ’ ಸಿನಿಮಾ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದೆ.

ಪ್ರತಿಯೊಬ್ಬರಿಗೂ ಲೈಂಗಿಕ ತಿಳಿವಳಿಕೆ ಮುಖ್ಯ ಎನ್ನುವುದನ್ನು ತಿಳಿಸುವ ಮುಖ್ಯ ಪಾತ್ರದಲ್ಲಿ ಅಂದರೆ ಕಾಂಡೋಮ್ ಮಾರಾಟಗಾರ್ತಿಯಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಅಭಿನಯಿಸಿದ್ದಾರೆ.,

ಸಿನಿಮಾ ಯಶಸ್ಸಿನ ಬೆನ್ನಲ್ಲೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ರಾಕುಲ್ಗೆ ಸಂದರ್ಶಕರಿಂದ ವಿಚಿತ್ರ ಪ್ರಶ್ನೆ ಎದುರಾಗಿತ್ತು.

ಇದಕ್ಕೆ ಅಷ್ಟೇ ತಿಳಿವಳಿಕೆಯಿಂದ ಉತ್ತರಿಸಿರುವ ರಾಕುಲ್, ಲೈಂಗಿಕ ಬಗೆಗಿನ ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ಒತ್ತಿ ಹೇಳಿದ್ದಾರೆ.

ಸಂದರ್ಶಕರು, ಒಬ್ಬ ವ್ಯಕ್ತಿ ಏಕಕಾಲದಲ್ಲಿ, ಹೆಚ್ಚು ಸುರಕ್ಷತೆಗೋಸ್ಕರ ಎರಡು ಕಾಂಡೋಮ್ಗಳನ್ನು ಬಳಸಬಹುದೇ? ಎಂದು ಕೇಳಿದ್ದರು.

ಇದಕ್ಕೆ ಉತ್ತರಿಸಿದ್ದ ಅವರು, ‘ಹ್ಹ.ಹ್ಹಹ್ಹ ಹ್ಹಾ.. ಇದು ತುಂಬಾ ಕೆಟ್ಟ ಕಲ್ಪನೆ, ಒಳ್ಳೆಯ ವಿಚಾರವಂತೂ ಅಲ್ಲ. ಏಕೆಂದರೆ ಏಕಕಾಲದಲ್ಲಿ ಹಾಕಿಕೊಂಡ ಎರಡು ಕಾಂಡೋಮ್ಗಳ ನಡುವಿನ ಘರ್ಷಣೆ ಸಂತೋಷಕ್ಕಿಂತ ದುಃಖ ತರಬಹುದು. ಹಾಗಾಗಿ, ನಿಜವಾಗಿಯೂ ಜಾಗರೂಕರಾಗಿರಲು ಬಯಸಿದರೆ ಐಯುಡಿ ಅಥವಾ ಎರಡನೇ ರೀತಿಯ ಗರ್ಭನಿರೋಧಕಗಳನ್ನು ಬಳಸಿ’ ಎಂದು ಸಲಹೆ ನೀಡಿದ್ದಾರೆ.

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವೆಬ್ಸೈಟ್ ವರದಿ ಮಾಡಿದೆ.

ರಾಕುಲ್ ಅನೇಕ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಅವುಗಳಲ್ಲಿ ಕೆಲವು ಅಂತಿಮ ಹಂತದಲ್ಲಿವೆ. ನಟಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಕುಲ್ ಅವರ 'ಡಾಕ್ಟರ್ ಜಿ' ಹಾಗೂ 'ತ್ಯಾಂಕ್ ಗಾಡ್', 'ಛತ್ರಿವಾಲಿ' ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಛತ್ರಿವಾಲಿ ಜಿ5 ಒಟಿಟಿಯಲ್ಲಿ ನೋಡಲು ಲಭ್ಯವಿದೆ.

ಅರಣ್ಯವಾಸಿಗಳ ಬದುಕಿನಲ್ಲಿ ಕಾಂತಾರದಿಂದ ಬದಲಾವಣೆ: ರಿಷಭ್ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.