ಮುಂಬೈ: ಬಾಲಿವುಡ್ ಚಿತ್ರ ಸ್ತ್ರೀ–2ರ ಅಭೂತಪೂರ್ವ ಯಶಸ್ಸು ಹಾಗೂ ಚಿತ್ರದ ಅಂತ್ಯದಲ್ಲಿ ಉಳಿಸಿರುವ ಕುತೂಹಲಕ್ಕೆ ತೆರೆ ಎಳೆದಿರುವ ನಟಿ ಶ್ರದ್ಧಾ ಕಪೂರ್, 3ನೇ ಭಾಗದ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

ಹಾಸ್ಯ ಹಾಗೂ ಹಾರರ್ ಕಥಾವಸ್ತುವುಳ್ಳ ‘ಸ್ತ್ರೀ’ ಚಿತ್ರದ ಮುಂದುವರಿದ ಭಾಗವಾಗಿರುವ ‘ಸ್ತ್ರೀ–2’ ಇತ್ತೀಚೆಗೆ ಬಿಡುಗಡೆಗೊಂಡು ಗಲ್ಲಾಪೆಟ್ಟಿಗೆಯಲ್ಲಿ ಸುಮಾರು ₹600 ಕೋಟಿ ಗಳಿಕೆ ಕಂಡಿದೆ. ಚಿತ್ರದ ನಿರ್ದೇಶಕ ಅಮರ್ ಕೌಶಿಕ್ ಅವರು ಈಗಾಗಲೇ ಚಿತ್ರದ ಮೂರನೇ ಭಾಗದ ಕಥೆಯ ಸಿದ್ಧತೆ ಆರಂಭಿಸಿದ್ದಾರೆ.

ಈ ವಿಷಯವನ್ನು ಖಚಿತಪಡಿಸಿರುವ ಶ್ರದ್ಧಾ, ‘ಚಿತ್ರದ ಮುಂದಿನ ಅವತರಣಿಕೆಯೂ ಅಷ್ಟೇ ಕುತೂಹಲಕಾರಿಯಾಗಿರುತ್ತದೆ ಎಂಬ ವಿಶ್ವಾಸವಿದೆ. ಅದು ಆದಷ್ಟು ಬೇಗನೆ ಸೆಟ್ಟೇರಲಿ ಎಂದು ನಿರೀಕ್ಷಿಸುತ್ತಿದ್ದೇನೆ. ಮೂರನೇ ಭಾಗ ಯಾವುದರ ಕುರಿತಾಗಿ ಇರಲಿದೆ ಎಂದು ತಿಳಿಯುವ ಕುತೂಹಲ ನನ್ನಲ್ಲೂ ಹೆಚ್ಚಾಗಿದೆ’ ಎಂದಿದ್ದಾರೆ.

‘2018ರಲ್ಲಿ ತೆರೆಕಂಡ ಸ್ತ್ರೀ ಚಿತ್ರದ ಕಥೆ ಕೇಳಿದ ನಂತರ, ಇಂಥದ್ದೊಂದು ಚಿತ್ರಕಥೆಯನ್ನು ನಾನು ಕೇಳಿಯೇ ಇಲ್ಲ ಎಂದೆನಿಸಿತು. ಈ ಚಿತ್ರದಲ್ಲಿನ ಪಾತ್ರ ನನಗೆ ಲಭಿಸಿದ್ದು ನನ್ನ ಅದೃಷ್ಟವೇ ಸರಿ. ಚಿತ್ರದಲ್ಲಿ ನಿಗೂಢವಾಗಿ ಬಂದು ಹೋಗುವ ನನ್ನ ಪಾತ್ರ ತುಂಬಾ ಇಷ್ಟವಾಯಿತು. ಚಿತ್ರದ ಸಂಭಾಷಣೆ ಹಾಗೂ ದೃಶ್ಯಗಳು ನನ್ನನ್ನು ನಗೆಗಡಲಿನಲ್ಲಿ ತೇಲಿಸಿವೆ ಎಂದಿದ್ದಾರೆ.

‘ಚಿತ್ರದ ಮೊದಲ ಭಾಗದ ನಂತರ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಿರುತ್ತವೆ. ಆದರೆ, ಅದನ್ನು ಕೇವಲ 2ನೇ ಭಾಗ ಎಂದು ಮಾಡದೆ, ಹೊಸ ಚಿತ್ರದ ರೀತಿಯಲ್ಲೇ ಹೊರತಂದ ನಿರ್ದೇಶಕ ಹಾಗೂ ನಿರ್ಮಾಪಕರ ಶ್ರಮ ಅನನ್ಯ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಂಥ ಕಥಾವಸ್ತು ಇರಬೇಕು. ಆದರೆ, ಸ್ತ್ರೀ–2 ಚಿತ್ರವು ಭರಪೂರ ಮನರಂಜನೆಯನ್ನು ಹೊಂದಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಸಂತಸ ವ್ಯಕ್ತಪಡಿಸಿದ್ದಾರೆ’ ಎಂದು ಶ್ರದ್ಧಾ ಸ್ತ್ರೀ ಚಿತ್ರದ ಪಯಣವನ್ನು ವಿವರಿಸಿರುವುದಾಗಿ ವರದಿಯಾಗಿದೆ.

ಈವರೆಗೂ ತೆರೆ ಕಂಡಿರುವ ಸ್ತ್ರೀ ಚಿತ್ರದ ಎರಡು ಭಾಗಗಳಲ್ಲಿ ಶ್ರದ್ಧಾ ಅವರೊಂದಿಗೆ ರಾಜಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಹಾಗೂ ಅಪರಶಕ್ತಿ ಖುರಾನಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.