ಮುಂಬೈ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಪಕ್ಷದ ರಾಜಕಾರಣಿ, ಮಹಾರಾಷ್ಟ್ರದ ಫಹಾದ್ ಅಹ್ಮದ್ ಎಂಬುವವರನ್ನು ಇತ್ತೀಚೆಗೆ ವಿವಾಹವಾದರು.

ಫಹಾದ್ ಅವರನ್ನು ಸ್ವರಾ, ‘ಸಹೋದರ’ ಎಂದು ಕರೆದ ವಿಷಯಕ್ಕೆ ಸಂಬಂಧಿಸಿದಂತೆ ಸ್ವರಾ ಭಾಸ್ಕರ್ ಮದುವೆ ಸಂಗತಿ ಸದ್ದು ಮಾಡುತ್ತಿದೆ. ಅಲ್ಲದೇ ಅದೇ ವಿಷಯಕ್ಕೆ ಸ್ವರಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ವಿಷಯ ಏನೆಂದರೆ ಫಹಾದ್ ಅಹ್ಮದ್ ಅವರನ್ನು ಪ್ರತಿಭಟನೆಯೊಂದರಲ್ಲಿ ಸ್ವರಾ ಭಾಸ್ಕರ್ ಭೇಟಿಯಾಗಿದ್ದರು. ಆ ನಂತರ ಇಬ್ಬರ ಸ್ನೇಹ ಮುಂದುವರೆದಿತ್ತು. ಇದೇ ವರ್ಷ ಫೆಬ್ರುವರಿ 2 ರಂದು ಟ್ವೀಟ್ ಮಾಡಿದ್ದ ಸ್ವರಾ ಭಾಸ್ಕರ್ ಫಹಾದ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದರು.

ಆ ಟ್ವೀಟ್ನಲ್ಲಿ ಸ್ವರಾ, ‘ಜನ್ಮದಿನದ ಶುಭಾಶಯಗಳು ಮಿಯಾನ್, ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳಿ ಸಹೋದರ. ನೀವು ಯಾವಾಗಲು ಸಂತೋಷವಾಗಿರಿ. ಹಾ.. ನಿಮಗೆ ವಯಸ್ಸಾಗುತ್ತಿದೆ ಈಗಲೇ ಮದುವೆಯಾಗಿ’ ಎಂದು ಹೇಳಿದ್ದರು. ಈ ವಿಷಯವನ್ನಿಟ್ಟುಕೊಂಡು ಇದೀಗ ಸ್ವರಾ ಅವರ ಕಾಲೆಳೆಯಲಾಗುತ್ತಿದೆ. ಅಂದಹಾಗೇ ಫಹಾದ್ ಅವರು ಸ್ವರಾ ಅವರಿಗಿಂತ 4 ವರ್ಷ ಚಿಕ್ಕವರು.

ಸಮಾಜವಾದಿ ಪಕ್ಷದ ಯುವ ಘಟಕ ‘ಸಮಾಜವಾದಿ ಯುವಜನ ಸಭಾ’ದ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷ ಫಹಾದ್ ಅಹ್ಮದ್ ಅವರನ್ನು ವಿವಾಹವಾಗಿರುವ ವಿಷಯವನ್ನು ಸ್ವರಾ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದರು.

ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಸ್ವರಾ ಅದಕ್ಕೆ ಒಂದು ಒಕ್ಕಣೆಯನ್ನೂ ಬರೆದಿದ್ದಾರೆ. 'ನಮಗೆ ಬೇಕಾದ ಕೆಲವನ್ನು ನಮ್ಮ ಪಕ್ಕದಲ್ಲೇ ಇಟ್ಟುಕೊಂಡು ಎಲೆಲ್ಲೋ ಹುಡುಕುತ್ತಿರುತ್ತೇವೆ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ನಾವು ಮೊದಲು ಸ್ನೇಹವನ್ನು ಕಂಡುಕೊಂಡೆವು. ತದನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡೆವು! ನನ್ನ ಹೃದಯಕ್ಕೆ ಸುಸ್ವಾಗತ ಫಹಾದ್ ಅಹ್ಮದ್. ಹೃದಯ ಗಲಿಬಿಲಿಗೊಂಡಿದೆ, ಆದರೆ ಅದು ನಿನ್ನದೇ!’ ಎಂದು ಸ್ವರಾ ಬರೆದಿದ್ದರು.

ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿಕೊಂಡಿರುವ ಫಹಾದ್ ಅಹ್ಮದ್, ‘ಈ ಗಲಿಬಿಲಿಯೂ ಇಷ್ಟು ಸುಂದರವಾಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕೈ ಹಿಡಿದಿದ್ದಕ್ಕಾಗಿ ನಿನಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು.

ಸ್ವರಾ ಭಾಸ್ಕರ್ ಕೊನೆಯ ಬಾರಿಗೆ ‘ಜಹಾನ್ ಚಾರ್ ಯಾರ್’ (2022) ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 'ಅನಾರ್ಕಲಿ ಆಫ್ ಆರಾಹ್', 'ವೀರೆ ದಿ ವೆಡ್ಡಿಂಗ್', 'ನಿಲ್ ಬತ್ತೆ ಸನ್ನತಾ' ಮತ್ತು 'ರಾಂಜನಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ವರಾ ಭಾಸ್ಕರ್ ಅಭಿನಯಿಸಿದ್ದಾರೆ.

ಐಎಎಸ್ ಸಿಂಧೂರಿ–ಐಪಿಎಸ್ ರೂಪಾ ಜಗಳ: ತನಿಖೆಗೆ ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.