ತಮಿಳು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ವೆಟ್ಟೈಯನ್. ಅಕ್ಟೋಬರ್ 10ರಂದು ದಸರಾ ಹಬ್ಬದ ವಿಶೇಷವಾಗಿ ಬಿಡುಗಡೆಯಾಗ್ತಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಖಾಕಿ ತೊಟ್ಟು ತಲೈವಾ ಅಬ್ಬರಿಸಿದ್ದಾರೆ. ಪೊಲೀಸ್ ಎನ್ ಕೌಂಟರ್ ತಪ್ಪಾ? ಸರಿನಾ? ಎಂಬ ಸುತ್ತ ಟ್ರೇಲರ್ ಸಾಗುತ್ತದೆ. ಟ್ರೇಲರ್ ನೋಡಿದ್ದಾಗ ‘ವೆಟ್ಟೈಯಾನ್’ ಇಬ್ಬರು ಮಹಾನ್ ನಟರ ನಡುವಿನ ಸಂಘರ್ಷ ಇದೆ ಎನ್ನುವಂತಿದೆ.

ಜೈ ಭೀಮ್ ಸಿನಿಮಾ ನಿರ್ದೇಶಿಸಿದ್ದ ಟೆ.ಜೆ.ಜ್ಞಾನವೇಲ್ ವೆಟ್ಟೈಯಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಮರ್ಷಿಯಲ್ ಅಂಶಗಳ ಜೊತೆ ಒಂದೊಳ್ಳೆ ಸಂದೇಶವನ್ನು ಸಿನಿಮಾ ಮೂಲಕ ಹೇಳೋದಿಕ್ಕೆ ಹೊರಟ್ಟಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ. ಚಿತ್ರದಲ್ಲಿ ಬಿಗ್ ಬಿ ನ್ಯಾಯಾಧೀಶರಾಗಿ ಕಾಣಿಸಿಕೊಂಡಿದ್ದು. ಫಹದ್ ಫಾಸಿಲ್ ಮತ್ತು ರಾಣಾ ದಗ್ಗುಬಾಟಿ ಅವರ ಪಾತ್ರಗಳನ್ನೂ ಟ್ರೇಲರ್ನಲ್ಲಿ ಪರಿಚಯಿಸಲಾಗಿದೆ.

ವೆಟ್ಟೈಯಾನ್ನಲ್ಲಿ ಅಮಿತಾಭ್ ಸತ್ಯದೇವ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ರಿತಿಕಾ ಸಿಂಗ್ ರೂಪ ಎಂಬ ಪೋಲೀಸ್ ಪಾತ್ರದಲ್ಲಿ, ದುಶಾರಾ ವಿಜಯನ್ ಶರಣ್ಯ ಎಂಬ ಶಿಕ್ಷಕಿಯಾಗಿ, ಮಂಜು ವಾರಿಯರ್ ತಾರಾ ಪಾತ್ರದಲ್ಲಿ, ರಾಣಾ ದಗ್ಗುಬಾಟಿ ನಟರಾಜ್ ಪಾತ್ರದಲ್ಲಿ ಮತ್ತು ಫಹಾದ್ ಫಾಸಿಲ್ ಪ್ಯಾಟ್ರಿಕ್ ಪಾತ್ರದಲ್ಲಿ ನಟಿಸಿದ್ದಾರೆ.

ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ವೆಟ್ಟೈಯಾನ್ ಸಿನಿಮಾ ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.