ಬೆಂಗಳೂರು: 'ಒಳ್ಳೊಳ್ಳೆ ಬಟ್ಟೆ ಧರಿಸಿ...ಮನೆಯಲ್ಲಿ ಕುಳಿತುಕೊಳ್ಳಿ'– ಹೀಗೊಂದು ಸಾಲಿನ ಜೊತೆಗೆ ಇತ್ತೀಚಿನ ಫೋಟೊಶೂಟ್ ತುಣುಕುಗಳನ್ನು ಬಾಲಿವುಡ್ ನಟಿ ವಿದ್ಯಾ ಬಾಲನ್ ಪ್ರಕಟಿಸಿಕೊಂಡಿದ್ದಾರೆ.

ಎಷ್ಟೇ ಉತ್ತಮ ವಿನ್ಯಾಸದ, ಅತ್ಯುತ್ತಮ ಬ್ರ್ಯಾಂಡ್‌ನ ಬಟ್ಟೆಗಳಿದ್ದರೂ ಸಾರ್ವಜನಿಕ ಓಡಾಟ, ಒಡನಾಟಗಳನ್ನು ಕೋವಿಡ್–19 ನಿಯಂತ್ರಿಸಿದೆ. ದೊಡ್ಡ ಸಮಾರಂಭಗಳು ಸಹ ವರ್ಚ್ಯುವಲ್ ಆಗುತ್ತಿವೆ, ಇಂಥ ಸಂದರ್ಭದಲ್ಲಿ ಡಿಸೈನರ್ ಡ್ರೆಸ್‌ಗಳನ್ನು ಹಾಕಿಕೊಂಡರೂ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದಾದ ಅವಕಾಶವಂತೂ ವಿರಳ ಎನ್ನುವುದನ್ನು ವಿದ್ಯಾ ಅವರ ಸಾಲುಗಳು ಧ್ವನಿಸುತ್ತಿರುವಂತಿದೆ.

42 ವರ್ಷ ವಯೋಮಾನದ ನಟಿ ವಿದ್ಯಾ, ಡಿಸೈನರ್ ಗೌನ್ ರೀತಿಯ ದಿರಿಸು ತೊಟ್ಟು ಫೋಟೊ ಶೂಟ್ ಮಾಡಿಸಿದ್ದಾರೆ. 'ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾರತದ ಸಾಂಪ್ರದಾಯಿಕ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತೀರಾ' ಎಂದು ಟೀಕಿಸುತ್ತಿದ್ದವರಿಗೆ 'ಇಲ್ಲಿದೆ ನನ್ನ ಉತ್ತರ' ಎಂದು ಮತ್ತೊಂದು ವಿಡಿಯೊ ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಂಡ 'ಶಕುಂತಲಾ ದೇವಿ' ವಿದ್ಯಾ ಅವರ ಕೊನೆಯ ಚಿತ್ರ. ಅಮಿತ್ ಮಸುರ್ಕರ್ ನಿರ್ದೇಶನದ 'ಶೆರಿನ್' ಚಿತ್ರದಲ್ಲಿ ಅರಣ್ಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕೋವಿಡ್ ಪರಿಸ್ಥಿತಿಯ ಕಾರಣದಿಂದಾದಿ ಚಿತ್ರ ನಿರ್ಮಾಣ ತಡವಾಗಿದೆ. ಪರಿಣೀತಾ, ಕಹಾನಿ, ದ ಡರ್ಟಿ ಪಿಕ್ಟರ್, ನೊ ಒನ್ ಕಿಲ್ಡ್ ಜೆಸ್ಸಿಕಾ,..ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆಯಿಂದಾಗಿ ವಿದ್ಯಾ ಗಮನಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.