ಮುಂಬೈ: ನಟ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ 'ಲೈಗರ್' ಸಿನಿಮಾ ಈಗಾಗಲೇ ದೇಶದಾದ್ಯಂತ ತೆರೆಕಂಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ನಡುವೆ ಲೈಗರ್ ಸಿನಿಮಾಕ್ಕೆ ದಿ ಇಂಟರ್‌ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ವೆಬ್‌ಸೈಟ್‌ನಲ್ಲಿ ಅತ್ಯಂತ ಕಳಪೆ ರೇಟಿಂಗ್ ದೊರೆತಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:'ಲೈಗರ್' ಟ್ವಿಟರ್ ವಿಮರ್ಶೆ: ವಿಜಯ್ ಅಬ್ಬರ; ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಐಎಂಡಿಬಿ ವೆಬ್‌ಸೈಟ್‌ನಲ್ಲಿ ಲೈಗರ್ ಸಿನಿಮಾಕ್ಕೆ 15,600ಕ್ಕೂ ಹೆಚ್ಚು ಮಂದಿ ರೇಟಿಂಗ್ ಸಲ್ಲಿಸಿದ್ದು, ಈ ಪೈಕಿ ಸಿನಿಮಾಕ್ಕೆ 1.7/10 ರೇಟಿಂಗ್ ದೊರೆತಿದೆ.

ಇತ್ತೀಚಿಗಿನ ಬಾಲಿವುಡ್ ಸಿನಿಮಾಗಳ ಪೈಕಿ ಅತಿ ಹೆಚ್ಚು ವಿರೋಧ ಎದುರಿಸಿದ್ದ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಖ್ಯಾತಿಯ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಐಎಂಡಿಬಿಯಲ್ಲಿ 5/10 ರೇಟಿಂಗ್ ಪಡೆದಿತ್ತು. ಈಗ ಲೈಗರ್ ಅದಕ್ಕಿಂತಲೂ ಕಳಪೆ ಎನಿಸಿಕೊಂಡಿದೆ.

ಈ ಕುರಿತು ಐಎಂಡಿಬಿಯಲ್ಲಿ ರಿವ್ಯೂ ಬರೆದಿರುವ ಸಿನಿಮಾ ಪ್ರೇಮಿಗಳು, ಲೈಗರ್‌ನಲ್ಲಿ ಕಥೆಯೇ ಇಲ್ಲ. ನಿರೀಕ್ಷಿತ ಕ್ಲೈಮ್ಯಾಕ್ಸ್ ಆಗಿದ್ದು, ಚಿತ್ರ ನೀರಸವಾಗಿದೆ ಎಂದೆಲ್ಲಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ನನ್ನೊಂದಿಗೆ ದೇವರು, ಅಮ್ಮನ ಆಶೀರ್ವಾದವಿದೆ: ವಿಜಯ್ ದೇವರಕೊಂಡ ಹೀಗೆ ಹೇಳಿದ್ದೇಕೆ?

ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆಗೆ ನಟಿಸಲು ಬರುವುದಿಲ್ಲ ಎಂದು ದೂರಲಾಗಿದೆ.

ದಯವಿಟ್ಟು ನಿಮ್ಮ ಅಮೂಲ್ಯ ಸಮಯವನ್ನು ಉಳಿಸಿರಿ. ಚಿತ್ರ ನೋಡಲು ಥಿಯೇಟರ್‌ಗೆ ಹೋಗಬೇಡಿ. ಈ ಸಿನಿಮಾ ಒಟಿಟಿಯಲ್ಲಿ ನೋಡುವುದಕ್ಕೂ ಯೋಗ್ಯವಲ್ಲ ಎಂದು ಟೀಕಿಸಲಾಗಿದೆ.

ಈ ನಡುವೆ ಧರ್ಮ ಪ್ರೊಡಕ್ಷನ್ಸ್ ಪ್ರಕಾರ ಲೈಗರ್ ಸಿನಿಮಾ, ಮೊದಲ ದಿನ ವಿಶ್ವದಾದ್ಯಂತ ಒಟ್ಟು ₹33.12 ಕೋಟಿ ಗಳಿಕೆ ಪಡಿದಿದೆ ಎಂದು ಟ್ವೀಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.