ಚೆನ್ನೈ: ‘ಲಿಯೋ’ ಯಶಸ್ವಿನಲ್ಲಿ ತೇಲಾಡುತ್ತಿರುವ ದಳಪತಿ ವಿಜಯ್, ಇದೀಗ ತಮ್ಮ 68ನೇ ಚಿತ್ರದ ಕುರಿತು ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ವಿಜಯ್ ಅವರ ಹೊಸ ಚಿತ್ರಕ್ಕೆ ನಿರ್ದೇಶಕ ವೆಂಕಟ್ ಪ್ರಭು ಆ್ಯಕ್ಷನ್ ಕಟ್ ಹೇಳಲಿದ್ದು, ಎಜಿಎಸ್ ಎಂಟರ್‌ಟೈನ್‌ಮೆಂಟ್‌ನ ಅರ್ಚನಾ ಕಲ್ಪತಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಎಂದು ಹೆಸರಿಡಲಾಗಿದೆ. ‘ಬೆಳಕು ಕತ್ತಲೆಯನ್ನು ನುಂಗುತ್ತದೆ ಆದರೆ ಕತ್ತಲೆ ಬೆಳಕನ್ನು ನುಂಗುವುದಿಲ್ಲ’ ಎಂಬ ಮಾರ್ಮಿಕವಾದ ಟ್ಯಾಗ್ ಲೈನ್ ನೀಡಲಾಗಿದೆ.

ಚಿತ್ರದ ಕುರಿತಂತೆ ಹೊಸ ವರ್ಷದ ಮುನ್ನಾ ದಿನ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿರುವ ವಿಜಯ್, ದ್ವಿಪಾತ್ರದಲ್ಲಿ ನಟಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಿತ್ರದಲ್ಲಿ ದೊಡ್ಡ ತಾರಾಗಣವಿರಲಿದ್ದು ಪ್ರಶಾಂತ್, ಪ್ರಭುದೇವ, ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಮೋಹನ್, ಜಯರಾಮ್, ಅಜ್ಮಲ್ ಅಮೀರ್ ಮತ್ತು ಯೋಗಿ ಬಾಬು ನಟಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.