ನವದೆಹಲಿ: ದೇಶದ ಬಹುದೊಡ್ಡ ಒಟಿಟಿ ವೇದಿಕೆ ಡಿಸ್ನಿ+ಹಾಟ್ಸ್ಟಾರ್ 46 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ ಎಂದು ಸಿಎಲ್ಎಸ್ಎ ಸಂಸ್ಥೆ ವರದಿ ಮಾಡಿದೆ.

ಡಿಸ್ನಿ+ಹಾಟ್ಸ್ಟಾರ್ನ ಚಂದಾದಾರರ ಸಂಖ್ಯೆಯು 5.9 ಕೋಟಿಗೆ ಇಳಿಕೆಯಾಗಿದೆ. ಇದರೊಂದಿಗೆ ಪ್ರತಿ ಪ್ರೇಕ್ಷಕನಿಂದ ಬರುವ ಸರಾಸರಿ ಆದಾಯ(ಎಎಆರ್ಪಿಯು) ₹48ಕ್ಕೆ ಇಳಿಕೆಯಾಗಿದ್ದು, ಜಾಹೀರಾತು ಆದಾಯ ಸಹ ಕುಸಿದಿದೆ.

2023ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪ್ರಸಾರ ಹಕ್ಕು ಕಳೆದುಕೊಂಡ ಹಿನ್ನೆಲೆಯಲ್ಲಿ ಡಿಸ್ನಿ+ ಹಾಟ್ಸ್ಟಾರ್ ಎಆರ್ಪಿಯು ಮತ್ತು ಚಂದಾದಾರಿಕೆ ನಷ್ಟ ಸಂಭವಿಸಿದೆ ಎಂದು ಸಿಎಲ್ಎಸ್ಎ ಹೇಳಿದೆ.

2023ರಿಂದ ಪ್ರಾರಂಭವಾಗಿರುವ ಭಾರತದ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ನ ಐದು ವರ್ಷಗಳ ಮಾಧ್ಯಮ ಹಕ್ಕುಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಡಿಸ್ನಿ ಮತ್ತು ವಯಾಕಾಮ್ 18 ನಡುವೆ ಹಂಚಿಕೆಯಾಗಿದೆ.

ಹಿಂದಿನ ಐದು ವರ್ಷಗಳಲ್ಲಿ, ಡಿಸ್ನಿ ಸ್ಟಾರ್ ಐಪಿಎಲ್ನ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಹೊಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.