ನ್ಯೂಯಾರ್ಕ್: ಜಗತ್ತಿನ ಪ್ರತಿಷ್ಟಿತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ(Met Gala) ಈ ವರ್ಷ ಕಳೆದ ಭಾನುವಾರ ಆರಂಭವಾಗಿದೆ. ಇಲ್ಲಿ ಭಾಗವಹಿಸಲು ಕೋಟ್ಯಧಿಪತಿಗಳಿಗೆ ಮಾತ್ರ ಸಾಧ್ಯ. ಇಲ್ಲಿ ಒಂದು ಟಿಕೆಟ್ಗೆ 30 ಸಾವಿರ ಯುಸ್ ಡಾಲರ್ ಇದೆ.

1948 ರಿಂದ ಅಮೆರಿಕದ ನ್ಯೂಯಾರ್ಕ್ ಮೆಟ್ರೊಪಾಲಿಟಿನ್ ಕಲಾ ವಸ್ತುಸಂಗ್ರಹಾಲಯಕ್ಕೆ ನಿಧಿ ಸಂಗ್ರಹಾರ್ಥವಾಗಿ ನಡೆಯುವಮೆಟ್ ಗಾಲಾ ಫ್ಯಾಶನ್ ಶೋ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ನಡೆದಿರಲಿಲ್ಲ.

ಈ ವರ್ಷ ಕಳೆದ ಭಾನುವಾರದಿಂದ ಆರಂಭವಾಗಿದ್ದು ಜಗದ್ವಿಖ್ಯಾತ ಮಾಡೆಲ್ಗಳು ಈ ಫ್ಯಾಶನ್ ಶೋದಲ್ಲಿ ಬೆಡಗು ಭಿನ್ನಾಣಗಳಿಂದ ಕಂಗೊಳಿಸುತ್ತಿದ್ದಾರೆ. ಇಂತಹ ಪ್ರಸಿದ್ಧ ಜಾಗತಿಕ ಶೋನಲ್ಲಿ ಈ ವರ್ಷ ಏಕೈಕ ಭಾರತೀಯರೊಬ್ಬರು ಮಾತ್ರ ಭಾಗವಹಿಸಿದ್ದಾರೆ. ಅವರೇ ಸುಧಾ ರೆಡ್ಡಿ.

ಅಮೆರಿಕದಲ್ಲಿರುವ ಬಿಲಿಯನೇರ್ ಹಾಗೂ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟಕ್ರ್ಚರ್ನ ಎಂಡಿ ಮೇಘ ಕೃಷ್ಣ ರೆಡ್ಡಿ ಅವರ ಹೆಂಡತಿ ಸುಧಾ ರೆಡ್ಡಿ ಅವರು ಮೆಟ್ ಗಾಲಾದಲ್ಲಿ ಭಾಗವಹಿಸಿದ್ದಾರೆ. ಫಲ್ಗುಣಿ ಹಾಗೂ ಶೇನ್ ಪಿಕಾಕ್ ಅವರು ಸಿದ್ದಪಡಿಸಿದ ಅದ್ಭುತ ಡಿಸೈನ್ ಉಡುಗೆಯಲ್ಲಿ ಸುಧಾ ರೆಡ್ಡಿ ಮೆಟ್ ಗಾಲಾದಲ್ಲಿ ಪಾಲ್ಗೊಂಡಿದ್ದಾರೆ.

ಫ್ಯಾಶನ್ ಪ್ರಿಯರು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಸುಧಾ ರೆಡ್ಡಿ, ಮೆಟ್ ಗಾಲಾದಲ್ಲಿ ಭಾಗವಹಿಸಿರುವ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಿಮ್ ಕರ್ದಾಶಿಯನ್, ಜೆನ್ನಿಫರ್ ಲೋಪೆಜ್, ಕೆಂಡಾಲ್ ಜೆನ್ನರ್, ಗಿಗಿ ಹಾಡಿಡ್, ಅಲಿಸಿಯಾ ಕೀ, ರಿಟಾ ಓರಾ, ಮಿಂಡಿ ಕಾಲಿಂಗ್, ಎಮಿಲಿ ಬ್ಲಂಟ್, ಮೇಘನ್ ಫಾಕ್ಸ್ ಸೇರಿದಂತೆ ಖ್ಯಾತನಾಮರು ಭಾಗವಹಿಸಿದ ಶೋನಲ್ಲಿ ಸುಧಾ ರೆಡ್ಡಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಇವನ್ನೂ ಓದಿ

ಕಿಮ್ ಕರ್ದಾಶಿಯಾನ್ ಲುಕ್ ಕಂಡು ಬೆರಗಾದ ಬಾಲಿವುಡ್ ಬೆಡಗಿ ಕರೀನಾ ಕಪೂರ್!

ಏಲಿಯನ್ನಂತೆ ಉಡುಗೆ ತೊಟ್ಟು ನೋಡುಗರನ್ನು ಚಕಿತಗೊಳಿಸಿದ ಈ ಮಾಡೆಲ್ ಯಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.