ಚಿತ್ರ: ರಾತ್ ಅಕೇಲಿ ಹೈ (ಹಿಂದಿ)
ನಿರ್ಮಾಣ: ಅಭಿಷೇಕ್ ಚೌಬೆ, ರಾನಿ ಸ್ಕ್ರೂವಾಲಾ
ನಿರ್ದೇಶನ: ಹನಿ ಟ್ರೆಹಾನ್
ತಾರಾಗಣ: ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ, ಶಿವಾನಿ ರಘುವಂಶಿ, ಆದಿತ್ಯ ಶ್ರೀವಾಸ್ತವ, ಪದ್ಮಾವತಿ ರಾವ್, ಇಳಾ ಅರುಣ್, ತಿಗ್ಮಾಂಶು ಧುಲಿಯಾ

‘ನೈವ್ಸ್ ಔಟ್’ ಎಂಬ ಅಮೆರಿಕನ್ ಇಂಗ್ಲಿಷ್ ಸಿನಿಮಾ ಕಳೆದ ವರ್ಷವಷ್ಟೆ ತೆರೆಕಂಡು ಜನಮನ ಗೆದ್ದಿತ್ತು. ‘ಕೊಲೆ ಮಾಡಿದವರು ಯಾರು’ ಎಂಬ ಪ್ರಶ್ನೆಯನ್ನು ಪ್ರೇಕ್ಷಕರಿಗೆ ಒಡ್ಡಿ, ಇವರಿರಬಹುದೇ, ಅವರಿರಬಹುದೇ ಎಂದು ಮನಸ್ಸು ಊಹಿಸಲು ಪ್ರೇರೇಪಿಸುವ ಪ್ರಕಾರದ ಚಿತ್ರ ಅದು. ಎಲ್ಲವೂ ಸಸ್ಪೆನ್ಸ್ ಅಲ್ಲ; ಥ್ರಿಲ್ಲರ್ನ ಅಂಶಗಳನ್ನೂ ಅಳವಡಿಸಿಕೊಂಡು ಮನಸ್ಸನ್ನು ಸದಾ ಒಳಗೊಳ್ಳುವ ಕಥನಕ್ರಮ.

ಅಂಥದ್ದೇ ‘ಟೆಂಪ್ಲೇಟ್’ನಲ್ಲಿ ತಯಾರಾಗಿದೆ ‘ರಾತ್ ಅಕೇಲಿ ಹೈ’. ಕಾಸ್ಟ್–ಡೈರೆಕ್ಟರ್ ಆಗಿದ್ದ ಹನಿ ಟ್ರೆಹಾನ್ ನಿರ್ದೇಶಕನ ಟೋಪಿ ತೊಟ್ಟ ಮೊದಲ ಚಿತ್ರವಿದು. ಪಾತ್ರಗಳನ್ನು ದುಡಿಸಿಕೊಂಡಿರುವ ರೀತಿ ಹಾಗೂ ನಿರೂಪಣಾ ವಿಧಾನ ಎರಡೂ ಅಂಶಗಳಲ್ಲಿ ಅವರ ಕೌಶಲ ಎದ್ದುಕಾಣುತ್ತದೆ.

ಕಾನ್ಪುರದ ದೊಡ್ಡ ಬಂಗಲೆಯ ಪ್ರಭಾವಿ ಅಜ್ಜನೊಬ್ಬ ಕೊಲೆಯಾಗುತ್ತಾನೆ; ಅದೂ ಆ ವಯಸ್ಸಿನಲ್ಲಿ ತನ್ನ ಎರಡನೇ ಮದುವೆಯಾದ ದಿನ ರಾತ್ರಿ. ಹಣ ಕೊಟ್ಟು ಕೊಂಡುತಂದ ಹೆಣ್ಣಿನ ಜತೆಗೆ ಅವನ ಎರಡನೇ ವಿವಾಹ ನಡೆದಿರುತ್ತದೆ. ಮನೆಯಲ್ಲಿ ಭಿನ್ನ ಧೋರಣೆಗಳ ಸಂಬಂಧಿಕರು. ಇಂತಹ ಕೊಲೆ ಪ್ರಕರಣವನ್ನು ಭೇದಿಸಲು ಇನ್ಸ್ಪೆಕ್ಟರ್ ಜತಿಲ್ ಯಾದವ್ ಬರುತ್ತಾನೆ. ಅಜ್ಜನ ಜತೆ ಎರಡನೇ ಮದುವೆಯಾದ ಹುಡುಗಿಯನ್ನು ಐದು ವರ್ಷಗಳ ಹಿಂದೆ ನೋಡಿದ್ದ ಅವನ ತಲೆಯೊಳಗೆ ಅವಳೇ ಕೊಲೆ ಮಾಡಿರಬಹುದೇ ಎಂಬ ಶಂಕೆ. ಆದರೆ, ಅವಳ ಕುರಿತು ಒಳಗೊಳಗೇ ಮೋಹ. ನಿರ್ಭಿಡೆಯಿಂದ ಮಾತನಾಡುವ ಅವಳ ಕತ್ತಲ ಬದುಕಿನ ಸತ್ಯಗಳನ್ನು ಕೇಳಿ ಗಂಟಲುಬ್ಬಿಸಿಕೊಳ್ಳುವ ಅವನು, ಕೊಲೆ ಪ್ರಕರಣದ ಸಿಕ್ಕುಗಳನ್ನೆಲ್ಲ ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಬಿಡಿಸಲಾರಂಭಿಸುತ್ತಾನೆ.

ವಿಚಾರಣೆ ನಡೆಯುತ್ತಾ ಹೋದಂತೆ ಪ್ರೇಕ್ಷಕರ ಮೆದುಳೂ ಕೊಲೆ ಇವರು ಮಾಡಿರಬಹುದೇ, ಅವರು ಮಾಡಿರಬಹುದೇ ಎಂದು ಪಾತ್ರಗಳ ಮೇಲಿನ ಗುಮಾನಿಯನ್ನು ಬದಲಿಸುವಂತಿದೆ ನಿರೂಪಣೆ. ‘ಸೇಕ್ರೆಡ್ ಗೇಮ್ಸ್’ ಸರಣಿಯ ಬರಹಗಾರರ ತಂಡದಲ್ಲಿ ಇದ್ದ ಸ್ಮಿತಾ ಸಿಂಗ್ ಈ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅಬ್ಬರದ ಹಂಗೇ ಇಲ್ಲದೆ ಸಹಜವಾದ ಧಾಟಿಯಲ್ಲಿ ದೃಶ್ಯಗಳನ್ನು ಕಟ್ಟುತ್ತಾ, ಮನರಂಜನೆಯನ್ನೂ ಉಣಬಡಿಸುವ ಸವಾಲಿನ ಬರಹ ಇದು. ಈ ಸಿನಿಮಾಗೆ ಅವರ ಕಾಣ್ಕೆ ಗಮನಾರ್ಹ.

ನೆಗೆಟಿವ್ ಪಾತ್ರಗಳ ಒರಟೊರಟು ಧೋರಣೆಯಿಂದಲೇ ಗುರುತಾಗಿರುವ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದಲ್ಲಿ ಆ ಚೌಕಟ್ಟಿನಿಂದ ಆಚೆ ಬಂದಿರುವುದು ‘ರಿಲೀಫ್’. ಯಾವುದೇ ಬಿಲ್ಡಪ್ ಇಲ್ಲದೆಯೂ ಪೊಲೀಸ್ ಪಾತ್ರವನ್ನು ಕಣ್ಣು ಕೀಲಿಸಿಕೊಂಡು ಪ್ರೇಕ್ಷಕ ನೋಡುವಂತೆ ಮಾಡುವ ಅಭಿನಯ ಜಾಣ್ಮೆ ಅವರಿಗಿದೆ. ರಾಧಿಕಾ ಆಪ್ಟೆ ನಯನಾಭಿನಯಕ್ಕೂ ಅಂಕಗಳು ಸಲ್ಲಬೇಕು. ನವಾಜುದ್ದೀನ್ ತಾಯಿಯ ಪಾತ್ರದಲ್ಲಿ ಇಳಾ ಅರುಣ್ ಚೆನ್ನಾಗಿ ನಟಿಸಿದ್ದಾರೆ. ಶಿವಾನಿ ರಘುವಂಶಿ ಚಿಕ್ಕಪ್ರಾಯದಲ್ಲೇ ಛಾಪು ಮೂಡಿಸಿದ್ದರೆ, ಆದಿತ್ಯ ಶ್ರೀವಾಸ್ತವ ಖಳನೋಟವನ್ನು ಚಿತ್ರದುದ್ದಕ್ಕೂ ತುಳುಕಿಸಿದ್ದಾರೆ.

ಊಹೆಗಳನ್ನೆಲ್ಲ ಮುರಿದು ಕೊಲೆ ಮಾಡಿದವರು ಬೇರೆ ಯಾರೋ ಎಂದು ತೋರಿಸುವ ಜಾಣ್ಮೆಯ ಸ್ಕ್ರಿಪ್ಟ್ ಕೊನೆಯ ಅರ್ಧ ಗಂಟೆ ಯಾಕೋ ತೆವಳಿದಂತೆ ಭಾಸವಾಗುತ್ತದೆ.

‘ನೆಟ್ಫ್ಲಿಕ್ಸ್’ ಒಟಿಟಿ ವ್ಯಾಪಕವಾಗಿ ಮಾರ್ಕೆಟಿಂಗ್ ಮಾಡುತ್ತಿರುವ ಅಪರಾಧ ಜಗತ್ತಿನ ಹಲವು ಮುಖಗಳ ಧೋರಣೆಯ ಚಿತ್ರಪಟಗಳ ಸಾಲಿಗೆ ಈ ಚಿತ್ರ ಇನ್ನೊಂದು ಗಟ್ಟಿ ಸೇರ್ಪಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.