ಬೆಂಗಳೂರು: ಇತ್ತೀಚೆಗೆ ಒಟಿಟಿಯಲ್ಲಿ ತೆರೆಕಂಡ ಮನೋಜ್ ಭಾಜಪೇಯಿ ಪ್ರಧಾನ ಭೂಮಿಕೆಯ ಫ್ಯಾಮಿಲಿ ಮ್ಯಾನ್ 2 ಸರಣಿಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಂಡ ಫ್ಯಾಮಿಲಿ ಮ್ಯಾನ್ 2 ಸರಣಿ ಬಳಿಕ ನಟ ಮನೋಜ್ ಭಾಜಪೇಯಿಗೆ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ.

ನೆಟ್‌ಫ್ಲಿಕ್ಸ್ ಇಂಡಿಯಾ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದ್ದು, ಮನೋಜ್ ಭಾಜಪೇಯಿಗೆ ಸರಣಿಗೆ ಸ್ವಾಗತ ಎಂದು ವೆಲ್‌ಕಮ್ ಮಾಡಲಾಗಿದೆ.

ಈ ಟ್ವೀಟ್‌ಗೆ ನಟ ಮನೋಜ್ ಭಾಜಪೇಯಿ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಸ್ವಾಗತಕ್ಕೆ ಧನ್ಯವಾದ ಎಂದಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್ 2’ ವಿವಾದ: ಟ್ರೆಂಡ್ ಆಯ್ತು 'ಬಾಯ್ಕಾಟ್ ಅಮೆಜಾನ್'

ಆದರೆ ಇವರಿಬ್ಬರ ಟ್ವೀಟ್ ಗಮನಿಸಿದ ಅಮೆಜಾನ್ ಪ್ರೈಮ್, ತನ್ನ ಅಮೆಜಾನ್ ಪ್ರೈಮ್ ವಿಡಿಯೊ ಇನ್ ಖಾತೆಯಲ್ಲಿ ಮನೋಜ್ ಭಾಜಪೇಯಿಯನ್ನು ಉದ್ದೇಶಿಸಿ, ಶ್ರೀಕಾಂತ್, ಕೆಲಸ ಬದಲಾಯಿಸುವುದರಿಂದ ದೊಡ್ಡ ಬದಲಾವಣೆಯಾಗುತ್ತದೆ ಅಲ್ಲವೇ ಎಂದು ಟ್ವೀಟ್ ಮಾಡಿದೆ.

ಬಿಡುಗಡೆಗೆ ಮುನ್ನವೇ ‘ಫ್ಯಾಮಿಲಿ ಮ್ಯಾನ್ 2’ ವಿವಾದ

ಅಮೆಜಾನ್ ಟ್ವೀಟ್‌ಗೆ ನಟ ಮನೋಜ್ ಪ್ರತಿಕ್ರಿಯಿಸಿದ್ದು, ಹಾಹಾ, ಇದು ಟಾಪ್ ಕ್ಲಾಸ್ ಆಗಿದೆ, ನಾನು ಕೆಲಸ ಬದಲಾಯಿಸುತ್ತಿಲ್ಲ, ಪಾತ್ರ ಮಾತ್ರ ಬದಲಾಗುತ್ತಿದೆ ಎಂದಿದ್ದಾರೆ.

'ತಾಂಡವ್' ವೆಬ್ ಸರಣಿ ವಿವಾದ: ಕ್ಷಮೆ ಕೋರಿದ 'ಅಮೆಜಾನ್ ಪ್ರೈಮ್'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.