ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಭೂಮಿ: ಸ್ಯಾನೆ ಚೆಂದಾಗಿತ್ತು ಸಾಣೇಹಳ್ಳಿ ನಾಟಕೋತ್ಸವ

Published : 16 ನವೆಂಬರ್ 2024, 23:30 IST
Last Updated : 16 ನವೆಂಬರ್ 2024, 23:30 IST
ಫಾಲೋ ಮಾಡಿ
Comments
ಚಿತ್ರದುರ್ಗ ಜಿಲ್ಲೆ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಆವರಣದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವವು ಹಲವು ಕಾರಣಗಳಿಂದ ಗಮನ ಸೆಳೆಯಿತು. ಇದು ಉತ್ತರ–ದಕ್ಷಿಣ ಕರ್ನಾಟಕದ ಬೆಸುಗೆಯಾಗಿಯೂ ಕಂಡಬಂದಿತು.
ಶಿವಕುಮಾರ ಬಯಲು ರಂಗಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಜನ
ಶಿವಕುಮಾರ ಬಯಲು ರಂಗಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಜನ
‘ಕಾಲಚಕ್ರ’ ನಾಟಕದ ದೃಶ್ಯ
‘ಕಾಲಚಕ್ರ’ ನಾಟಕದ ದೃಶ್ಯ
‘ಕೋಳೂರು ಕೊಡಗೂಸು‘ ನಾಟಕದ ದೃಶ್ಯ
‘ಕೋಳೂರು ಕೊಡಗೂಸು‘ ನಾಟಕದ ದೃಶ್ಯ
ಸತ್ಯ ಅಹಿಂಸೆ ಶಾಂತಿ ಸಹಕಾರ ತತ್ವಗಳ ಸರ್ವೋದಯ ಪರಿಕಲ್ಪನೆ ಈ ಬಾರಿ ನಾಟಕೋತ್ಸವದ ಧ್ಯೇಯವಾಗಿತ್ತು. ಬುದ್ಧ ಬಸವ ಗಾಂಧೀಜಿಯವರು ಪ್ರೀತಿ ಕರುಣೆ ಸಹೋದರತ್ವದ ಮೂಲಕ ಸರ್ವೋದಯಕ್ಕಾಗಿ ಶ್ರಮಿಸಿದ್ದಾರೆ. ಆ ಮೂಲಕ ಸಮಾಜದ ಕಟ್ಟಕಡೆಯ ಮನುಷ್ಯ ಹಾಗೂ ಎಲ್ಲಾ ಜೀವರಾಶಿಗಳಿಗೆ ಒಳಿತು ಮಾಡಿದ್ದಾರೆ. ಅದೇ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂಬುದು ನಮ್ಮ ಆಶಯ.
–ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾ ಮಠ ಸಾಣೇಹಳ್ಳಿ
ಶಿವಕುಮಾರ ಬಯಲು ರಂಗಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತಗೋಮ
ಶಿವಕುಮಾರ ಬಯಲು ರಂಗಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತಗೋಮ
ಲಾರಿ ಏರಿ ಬಂದರು...
ಸಾಣೇಹಳ್ಳಿಯ ಸುಂದರ ಪರಿಸರದಲ್ಲಿ ನಾಟಕ ನೋಡುವುದೇ ಕೆಲವರಿಗೆ ಜೀವನ ಪ್ರೀತಿಯ ಸಂಕೇತವಾಗಿದ್ದು ರಾಜ್ಯದ ವಿವಿಧೆಡೆಯಿಂದ ಅಲ್ಲಿಗೆ ಬಂದಿದ್ದರು. ಆದರೆ ಹೊಸದುರ್ಗ ತಾಲ್ಲೂಕಿನ ಗಡಿಯಲ್ಲಿರುವ ಸಾಣೇಹಳ್ಳಿಗೆ ಬಸ್‌ ಸಂಪರ್ಕವಿಲ್ಲ. ಕಡೂರು ಬಸ್‌ ಹತ್ತಿ ಸಾಣೇಹಳ್ಳಿ ಗೇಟ್‌ನಲ್ಲಿ ಇಳಿದು ಮೂರು ಕಿಲೊಮೀಟರ್‌ ಸಾಗಬೇಕು. ಗಣ್ಯರನ್ನು ಗೇಟ್‌ನಿಂದ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯ ಪ್ರೇಕ್ಷಕರು ಗೇಟ್‌ನಿಂದ ಲಾರಿ ಆಪೆ ಆಟೊ ಸೇರಿದಂತೆ ಸಿಕ್ಕಸಿಕ್ಕ ವಾಹನ ಹತ್ತಿ ಸಾಣೇಹಳ್ಳಿ ತಲುಪಿದರು. ಪ್ರಯಾಣದ ಕಷ್ಟದ ನಡುವೆಯೂ ನಾಟಕ ಪ್ರೀತಿ ಅನಾವರಣಗೊಳಿಸಿದರು. ರಾತ್ರಿ 9.30ಕ್ಕೆ ನಾಟಕ ಆರಂಭವಾಗಿ ಮಧ್ಯರಾತ್ರಿ 12 ಗಂಟೆಗೆ ಮುಗಿಯುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT